ಉಡುಪಿ:ಸುನಾಗ್ ಆಸ್ಪತ್ರೆ ಕುಂಜಿಬೆಟ್ಟು ಉಡುಪಿ ಇವರ ಆಶ್ರಯದಲ್ಲಿ ಸುನವ್ಯ ಮತ್ತು ಸಂಹಿತ ಇವರ ಆರ್ಟ್ ಮತ್ತು ಆರ್ಟಿಕಲ್ಸ್ ಎಂಬ ಪುಸ್ತಕದ ಬಿಡುಗಡೆ ಸಮಾರಂಭ ಇದೇ ಬರುವ 9ನೇ ತಾರೀಕು ಸೋಮವಾರ ಸಂಜೆ 5 ಗಂಟೆಗೆ ಉಡುಪಿ ಕಡಿಯಾಳಿಯ ಭರತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.
ಸಭಾಧ್ಯಕ್ಷತೆಯನ್ನು ಡೆಂಟಾ ಕೇರ್ ನಿರ್ದೇಶಕ ಡಾ| ವಿಜಯೇಂದ್ರ ರಾವ್ ವಹಿಸಲಿದ್ದು, ಮಣಿಪಾಲ ಕೆಎಂಸಿಯ ಮೂಳೆ ರೋಗ ತಜ್ಞರಾದ ಡಾ| ಕಿರಣ್ ಆಚಾರ್ಯ ಪುಸ್ತಕದ ಪರಿಚಯವನ್ನು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ | ಎ.ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕರಾಗಿರುವ ಡಾ| ಪಿ. ವಿ ಭಂಡಾರಿಯವರು ಇರುತ್ತಾರೆ. ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಸುನಾಗ್ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ| ನರೇಂದ್ರ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Kshetra Samachara
06/08/2021 02:53 pm