ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 75ನೇ ಸ್ವಾತಂತ್ರ್ಯೋತ್ಸವ, 75 ಫ್ರೀಡಂ ಟ್ರೀ ಪಾರ್ಕ್ ನಿರ್ಮಾಣ; ರೋಹನ್ ಎಂ.ಶಿರಿ

ದೇಶಕ್ಕೆ ಸ್ವಾತಂತ್ರ್ಯ ಬಂದು ಮುಂದಿನ ವರ್ಷ 75 ವರ್ಷ ತುಂಬುತಿದ್ದು, ಈ ಹಿನ್ನೆಲೆಯಲ್ಲಿ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು 75 ಫ್ರೀಡಂ ಟ್ರೀ ಪಾರ್ಕ್ ನಿರ್ಮಾಣದ ಯೋಜನೆ ಹೊಂದಲಾಗಿದೆ ಎಂದು ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್‌ನ ಸ್ಥಾಪಕ ರೋಹನ್ ಎಂ.ಶಿರಿ ಹೇಳಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಅವರು, ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್, ಎನ್ಇಸಿಎಫ್ ವನ ಟ್ರಸ್ಟ್ ಹಾಗೂ ಸ್ವಚ್ಛ ಕಾರ್ಕಳ ಬ್ರಿಗೇಡ್ ಸಹಯೋಗದಲ್ಲಿ‌ ಆಗಸ್ಟ್ 15ರಂದು ಇಡೀ ದಕ್ಷಿಣ ಭಾರತಾದ್ಯಂತ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಅಂದು ಏಕಕಾಲದಲ್ಲಿ 75 ವಿವಿಧ ತಂಡಗಳು, ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ 75 ವಿವಿಧ ಸಸ್ಯಗಳೊಂದಿಗೆ 75 ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪಾರ್ಕ್ ರಚಿಸುವ ಉದ್ದೇಶವಿದೆ ಎಂದರು.

ಈ ನಮ್ಮ 75 ಫ್ರೀಡಂ ಟ್ರೀ ಪಾರ್ಕ್ ಸಾಮಾನ್ಯ ಜನರನ್ನು ತಲುಪಬೇಕೆಂಬ ಉದ್ದೇಶದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ನಮ್ಮೊಂದಿಗೆ ಕೈಜೋಡಿಸಬಹುದು. ಗಿಡ ನೆಟ್ಟು ಪೋಷಿಸುವ ಎಲ್ಲರಿಗೂ 75 ವಿವಿಧ ತಳಿಯ ಸಸಿಗಳನ್ನು ನಾವು ಉಚಿತವಾಗಿ ಒದಗಿಸುತ್ತೇವೆಎಂದು ರೋಹನ್ ಎಂ.ಶಿರಿ ಹೇಳಿದರು.

Edited By :
Kshetra Samachara

Kshetra Samachara

23/07/2022 06:27 pm

Cinque Terre

21.19 K

Cinque Terre

2

ಸಂಬಂಧಿತ ಸುದ್ದಿ