ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಗಲಿದ ನಾಡಿನ ಹಿರಿಯ ಚಿಂತಕ, ಹೋರಾಟಗಾರ ಜಿ.ರಾಜಶೇಖರ್‌ಗೆ ಗಣ್ಯರ ಸಂತಾಪ

ನಾಡಿನ ಹಿರಿಯ ಚಿಂತಕ‌, ಜನಪರಹೋರಾಟಗಾರ, ಲೇಖಕ ಜಿ.ರಾಜಶೇಖರ್ (75) ನಿಧನಕ್ಕೆ ನಾಡಿನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಿನ್ನೆ ರಾತ್ರಿ ನಿಧನ ಹೊಂದಿದ ರಾಜಶೇಖರ್ ಅವರ ಅಂತಿಮ ದರ್ಶನಕ್ಕೆ ಇವತ್ತು ಉಡುಪಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಚಿಂತಕ ಕೆ.ಎಲ್ ಅಶೋಕ್, ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, ಉದ್ಯಾವರ ನಾಗೇಶ್ ಮತ್ತಿತರರು ಅಂತಿಮ ದರ್ಶನ ಪಡೆದರು.

ಜಿ.ರಾಜಶೇಖರ್ ಅಗಲಿಕೆ ನಾಡಿಗಾದ ದೊಡ್ಡ ನಷ್ಟ. ಕರ್ನಾಟಕ ಬಹುತ್ವ ಸಾಂಸ್ಕೃತಿಕ ಪರಂಪರೆಯ ಕೊಂಡಿಯೊಂದುಕಳಚಿದಂತಾಗಿದೆ. ಅವರ ವಿಚಾರಧಾರೆ ಮುಂದಿನ ದಿನಗಳಲ್ಲೂ ಜೀವಂತ ಇರಲಿದೆ ಎಂದು ಗಣ್ಯರು ಸಂತಾಪ ಸೂಚಿಸಿದ್ದಾರೆ.

Edited By :
Kshetra Samachara

Kshetra Samachara

21/07/2022 03:43 pm

Cinque Terre

6.12 K

Cinque Terre

0

ಸಂಬಂಧಿತ ಸುದ್ದಿ