ಜೂನ್ ಆರರಂದು ನಾಪತ್ತೆಯಾಗಿರುವ ದೆಂದೂರುಕಟ್ಟೆ ಸಮೃದ್ಧಿ ನಗರದ ಯುವಕ ಪುನೀತ್ ಎಂಬಾತನ ಪತ್ತೆಗಾಗಿ ಕಾಪು ಪೊಲೀಸರು, ಜಿಲ್ಲಾ ಅಗ್ನಿಶಾಮಕದಳ, ಮುಳುಗು ತಜ್ಞ ಈಶ್ವರ್ ಮಲ್ಪೆ ಪ್ರವೀಣ್ ಕುಮಾರ್ ಕುರ್ಕಾಲು ಮತ್ತು ತಂಡ ಶೋಧ ನಡೆಸುತ್ತಿದೆ.
ಜು.6ರಂದು ಈ ಯುವಕನ ಸ್ಕೂಟರ್ ಅಲೆವೂರು ದೆಂದೂರುಕಟ್ಟೆ ಸೇತುವೆಯ ಮೇಲೆ ಇರಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಹೊಳೆಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು. ದ್ವಿಚಕ್ರ ವಾಹನದಲ್ಲಿ ಆಧಾರ್ ಕಾರ್ಡ್ ಹಾಗೂ ವಾಹನದ ಬೀಗವೂ ಅದರಲ್ಲೇ ಕಂಡು ಬಂದಿತ್ತು. ಬಳಿಕ ನಾಪತ್ತೆಯಾಗಿರುವ ಈ ಯುವಕನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗದೆ ಮನೆಮಂದಿ ಚಿಂತಿತರಾಗಿದ್ದರು.
ಈ ಬಗ್ಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಈತನ ಮನೆಗೆ ತೆರಳಿ ಮನೆಮಂದಿಗೆ ಸಾಂತ್ವನ ನೀಡಿ ಕಾರ್ಯಾಚರಣೆ, ತನಿಖೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಉದ್ಯಾವರ ಪಾಪನಾಶಿನಿ ಹೊಳೆ, ಮಟ್ಟು ಭಾಗದ ಹೊಳೆಯಲ್ಲಿ ಈತನ ಪತ್ತೆಗಾಗಿ ಅಂದಾಜು 8 ಕಿ. ಮೀ. ಗೂ ಅಧಿಕ ಕ್ರಮಿಸಿ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಲಿಲ್ಲ.
Kshetra Samachara
12/07/2022 01:12 pm