ಶ್ರೀ ಕಾಶಿ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಮಂಗಳೂರಿನ ಕಾರ್ ಸ್ಟ್ರೀಟ್‌ನ ಶ್ರೀವೆಂಕಟರಮಣ ದೇವಾಲಯದಲ್ಲಿ ಈ ಬಾರಿ ತಮ್ಮ ಚಾತುರ್ಮಾಸ ವ್ರತವನ್ನು ಕೈಗೊಳ್ಳಲಿದ್ದಾರೆ. ಜುಲೈ 18ರಿಂದ ನವೆಂಬರ್ 5ರವರೆಗೆ ಚಾತುರ್ಮಾಸ ನಡೆಯಲಿದೆ.
ಈ ಬಗ್ಗೆ ಶ್ರೀವೆಂಕಟರಮಣ ದೇವಾಲಯದ ಟ್ರಸ್ಟಿ ಜಗನ್ನಾಥ ಕಾಮತ್ ಮಾತನಾಡಿ, ಕೊಂಚಾಡಿಯಲ್ಲಿ ಮೊಕ್ಕಾಂ ಹೂಡುವ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಜುಲೈ 9ರಂದು ಪುರಪ್ರವೇಶಗೈಯ್ಯಲಿದ್ದಾರೆ. ಅಂದು ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸುವ ಅವರು, ಜುಲೈ 17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜುಲೈ 18ರಂದು ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾತುರ್ಮಾಸ ವ್ರತವನ್ನು ಆರಂಭಿಸಲಿದ್ದಾರೆ. ಅಂದು ಸಂಜೆ 7 ಗಂಟೆಗೆ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಆ ಬಳಿಕ ಮುಂದಿನ ನವೆಂಬರ್ 5ರ ಚಾತುರ್ಮಾಸ ವ್ರತ ಮುಗಿಯುವಲ್ಲಿವರೆಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
Kshetra Samachara
07/07/2022 03:39 pm