ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ವ್ಯಕ್ತಿ ಹೃದಯಾಘಾತದಿಂದ ಸಾವು!

ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ವ್ಯಕ್ತಿಯೊಬ್ವರು ವಿರಮಿಸುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತ ಫೂಟೇಜ್ ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯವಾಗಿದೆ. ಉಡುಪಿಯ ಅಂಬಾಗಿಲು ಸಮೀಪ ಈ ಘಟನೆ ನಡೆದಿದ್ದು ಮೃತರನ್ಬು ಗಣಪತಿ ಆಚಾರ್ಯ (56) ಎಂದು ಗುರುತಿಸಲಾಗಿದೆ.

ಇವರು ಮಂಗಳವಾರ ರಾತ್ರಿ ಅಂಬಾಗಿಲು ಪುತ್ತೂರಿನಲ್ಲಿ ನೆರೆಮನೆಯ ಸಂಬಂಧಿಕರ ಮೆಹೆಂದಿಯಲ್ಲಿ ಭಾಗವಹಿಸಿದ್ದರು.ಸ್ನೇಹಿತರು ಮತ್ತು ಸಂಬಂಧಿಕರ ಜೊತೆ ನೃತ್ಯ ಮಾಡುತ್ತಿದ್ದ ಗಣಪತಿ ಆಚಾರ್ಯ, ಸುಸ್ತಾಗಿ ಚೈರ್‌ನಲ್ಲಿ ಕುಳಿತಿದ್ದಾರೆ. ಕುಳಿತ ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡುಹೋಗಲಾಯಿತಾದರೂ ಅವರು ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಗೊತ್ತಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Edited By :
PublicNext

PublicNext

22/06/2022 04:52 pm

Cinque Terre

53.97 K

Cinque Terre

6

ಸಂಬಂಧಿತ ಸುದ್ದಿ