ಕುಂದಾಪುರ : ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶಾರದಾ ಮಹೋತ್ಸವದ 48ನೇ ವರ್ಷದ ಸಮಾರಂಭದ ಅಂಗವಾಗಿ ಶ್ರೀದೇವಿಯ ಪ್ರೀತ್ಯರ್ಥ ಹಾಗೂ ಲೋಕ ಕಲ್ಯಾಣಾರ್ಥ ಮತ್ತು ಗ್ರಾಮಾಭಿವೃದ್ಧಿಗಾಗಿ ಶ್ರೀ ಚಂಡಿಕಾಯಾಗ ಸೋಮವಾರ ನಡೆಯಿತು.
ಗಂಗೊಳ್ಳಿ ಕಾಂತು ಬಾಬು ಖಾರ್ವಿ ದಂಪತಿ, ಪ್ರವೀಣ ಶೆಟ್ಟಿ ಕೊಡ್ಲಾಡಿ ದಂಪತಿ ಹಾಗೂ ಸಂತೋಷ ಪೂಜಾರಿ ತ್ರಾಸಿ ದಂಪತಿ ಯಾಗದ
ಯಜಮಾನಿಕೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಸಮಿತಿಯ ಅಧ್ಯಕ್ಷ ಗೋಪಾಲ ಖಾರ್ವಿ ದಾವನಮನೆ, ಪ್ರಧಾನ ಕಾರ್ಯದರ್ಶಿ ಶೇಖರ ಜಿ., ಕಾರ್ಯದರ್ಶಿ ನಿತಿನ್ ಖಾರ್ವಿ, ಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಾ
ಸಿ.ಪೂಜಾರಿ, ಕಾರ್ಯದರ್ಶಿ ಸ್ವಾತಿ ಮಡಿವಾಳ, ಶ್ರೀ ಶಾರದೋತ್ಸವ ಸಮಿತಿ ಮತ್ತು ಮಹಿಳಾ ಮಂಡಳಿ ಪದಾಧಿಕಾರಿಗಳು, ಸದಸ್ಯರು,
ಸ್ಥಳೀಯರು, ಭಜಕರು, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/10/2022 08:50 pm