ಮನುಷ್ಯನಾದವ ಫಲಾಪೇಕ್ಷೆಯನ್ನು ಇಟ್ಟುಕೊಳ್ಳದೆ ಕರ್ಮವನ್ನು ಮಾಡಬೇಕು. ಆ ಕರ್ಮವು ಕೃಷ್ಣಪ್ರೀತಿಯ ಉದ್ದೇಶವನ್ನು ಹೊಂದಿರಬೇಕು. ಆಗ ಮಾತ್ರ ಅದು ಬಂಧಕ ರೂಪವನ್ನು ತಾಳುವುದಿಲ್ಲ. ಫಲಾಪೇಕ್ಷೆಯ ಆಗ್ರಹ ಮತ್ತು ಅಭಿಮಾನ ಸೇರಿದರೆ ವಿಷ್ಣು ಪ್ರೀತಿ ಎನ್ನುವುದು ಮರೀಚಿಕೆಯಾಗುತ್ತದೆ.
ಆದುದರಿಂದ ಅಭಿಮಾನ ತ್ಯಾಗಪೂರ್ವಕ ಕರ್ಮ ಮಾಡಬೇಕು. ಆ ಕರ್ಮ ವಿಷ್ಣುಪೂಜಾತ್ವೇನ ಸತ್ಕರ್ಮವಾಗಿ ವಿಷ್ಣು ಪ್ರೀತಿ ಸಂಪಾದಿಸಲು ಕಾರಣವಾಗುತ್ತದೆ. ಫಲಾಫಲಗಳು ದೈವಾಧೀನ, ಕರ್ಮ ಮಾಡುವಲ್ಲಿ ಮಾತ್ರ ಮನುಷ್ಯನಿಗೆ ಅವಕಾಶ ಇದೆ. ಅಂತಹ ಸದವಕಾಶವನ್ನು ಭಗವಂತನ ಪ್ರೀತಿಗಾಗಿ ಯಥೋಚಿತ ಉಪಯೋಗಿಸಿ, ಎಲ್ಲರೂ ಶ್ರೀಕೃಷ್ಣಾನುಗ್ರಹಕ್ಕೆ ಭಾಜನರಾಗಬೇಕು ಎಂದು ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅಷ್ಠಮಿ ಸಂದೇಶ ನೀಡಿದ್ದಾರೆ.
Kshetra Samachara
19/08/2022 12:58 pm