ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹಿಂದೂ ಸಂಘಟನೆಗಳಿಂದ ಸಾವರ್ಕರ್ ಬೆಂಬಲಿಸಿ ಮಾನವ ಸರಪಳಿ ರಚನೆ

ಜಿಲ್ಲೆಯಲ್ಲಿ ಸಾವರ್ಕರ್ ಅಭಿಮಾನ ಜೋರಾಗಿದ್ದು ನಿನ್ನೆ ಉಡುಪಿ ಬಳಿಕ ಇವತ್ತು ಕುಂದಾಪುರದಲ್ಲಿ ಹಿಂದೂ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತಿವೆ. ಕುಂದಾಪುರದ ಹಿಂದೂಜಾಗರಣ ವೇದಿಕೆ ಮತ್ತು ಹಿಂದು ಯುವ ವಾಹಿನಿ ನೇತೃತ್ವದಲ್ಲಿ ಇವತ್ತು ಸಾವರ್ಕರ್ ಬೆಂಬಲಿಸಿ ಮಾನವ ಸರಪಳಿ ರಚನೆ ಮಾಡಲಾಯಿತು. ಇದಕ್ಕೆ ಕುಂದಾಪುರ ದ ಎವಿಬಿವಿ ವಿದ್ಯಾರ್ಥಿಗಳೂ ಸಾಥ್ ನೀಡಿದರು.

ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ವಿದ್ಯಾರ್ಥಿಗಳು ತಮ್ಮ ಬೆಂಬಲ ಸೂಚಿಸಿದರು.ರಾಜ್ಯದಲ್ಲಿ ನಡೆಯುತ್ತಿರುವ ಸಾವರ್ಕರ್ ಪರ ವಿರೋಧ ಚರ್ಚೆ ಹಿನ್ನೆಲೆಯಲ್ಲಿ

"ನಾನು ಸಾವರ್ಕರ್," ನಾವೂ ಸಾವರ್ಕರ್ "ಅಭಿಯಾನವನ್ಬು ಹಿಂದೂಪರ ಸಂಘಟನೆಗಳು ಆಯೋಜಿಸಿವೆ. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ ಪಿ ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.

Edited By :
Kshetra Samachara

Kshetra Samachara

18/08/2022 02:27 pm

Cinque Terre

6.44 K

Cinque Terre

2

ಸಂಬಂಧಿತ ಸುದ್ದಿ