ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಸಹಾಯಕ ಕುಟುಂಬಗಳ ಎರಡು ಶವಗಳ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ವಿಶು ಶೆಟ್ಟಿ

ವೃದ್ಧಾಪ್ಯ ಹಾಗೂ ಅನಾರೋಗ್ಯದಿಂದ ಮೃತಪಟ್ಟ ವಾರಸುದಾರರಿಲ್ಲದ ಎರಡು ಶವಗಳ ಅಂತ್ಯ ಸಂಸ್ಕಾರವನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿದ್ದ ಗೋಸ್ವಾಮಿ ಎಂಬವರು ಅನಾರೋಗ್ಯದಿಂದ 10 ದಿನಗಳ ಹಿಂದೆ ಮೃತಪಟ್ಟಿದ್ದು, ಮಾಧ್ಯಮ ಪ್ರಕಟನೆ ನೀಡಿದರೂ ವಾರಸುದಾರರು ಸಿಕ್ಕಿಲ್ಲ. ಇನ್ನೊಬ್ಬರು ಸ್ಥಳೀಯರೇ ಆದ ಗಿರಿಯ ಎನ್ನುವವರು ಕೆಮ್ಮಣ್ಣಿನ ಇಮಾನ್ಯುವೆಲ್ ಆಶ್ರಮದಲ್ಲಿ ಆಶ್ರಯಪಡೆದಿದ್ದರು.ಅನಾರೋಗ್ಯದಿಂದ ಅವರು ಮೃತಪಟ್ಟಾಗ ಸಂಬಂಧಿಕರು ಸ್ಪಂದಿಸಿದ ಹಿನ್ನಲೆಯಲ್ಲಿ ಈ ಇಬ್ಬರ ಶವಗಳನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಹೊಸಬೆಳಕು ಆಶ್ರಮದ ಮುಖ್ಯಸ್ಥರಾದ ತನುಲಾ ತರುಣ್, ವಿನಯಚಂದ್ರ ಸಾಸ್ತಾನ ಹಾಗೂ ಇಮಾನ್ಯುವೆಲ್ ಆಶ್ರಮದ ಮುಖ್ಯಸ್ಥರ ಸಹಕಾರದೊಡನೆ ಬೀಡಿನಗುಡ್ಡೆಯ ಸ್ಮಶಾನದಲ್ಲಿ ನೆರವೇರಿಸಿದರು.ಅಂತ್ಯಸಂಸ್ಕಾರದ ಎಲ್ಲ ಖರ್ಚುವೆಚ್ಚಗಳನ್ನು ವಿಶು ಶೆಟ್ಟಿ ಅವರೇ ಭರಿಸಿದ್ದಾರೆ.

Edited By :
Kshetra Samachara

Kshetra Samachara

16/08/2022 08:20 pm

Cinque Terre

15.1 K

Cinque Terre

0

ಸಂಬಂಧಿತ ಸುದ್ದಿ