ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

" ಕನ್ನಡಿ ಕೈ ಬರಹ " ಪ್ರತಿಭೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ!

ಉಡುಪಿಯ ಅಕ್ಷಿತಾ ಹೆಗ್ಡೆ ಅಪರೂಪದ ಸಾಧನೆ ಮಾಡಿದ್ದಾರೆ. ತಮ್ಮ ಅಪೂರ್ವ ಶೈಲಿಯ ಬರಹದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಯಾಗಿದ್ದಾರೆ.

ಅಕ್ಷಿತಾ , ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಕನ್ನಡಿ ಕೈ ಬರಹದ ಮೂಲಕ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ಮುದ್ರಿಸಿದ್ದಾರೆ. ಮಂಕುತಿಮ್ಮನ ಕಗ್ಗದಲ್ಲಿ 900 ಕ್ಕೂ ಅಧಿಕ ಪದ್ಯಗಳಿದ್ದು, ಈ ಪೈಕಿ 13 ಆಯ್ಕೆ ಮಾಡಿಕೊಂಡಿರುವ ಅಕ್ಷಿತಾ ಹೆಗ್ಡೆ 52 ಲೈನ್ಗಳನ್ನು 45.11 ನಿಮಿಷದಲ್ಲಿ ಬರೆದು ಈ ಸಾಧನೆ ಮೆರೆದಿದ್ದಾರೆ.

ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದವರಾದ ಅಕ್ಷಿತಾ, ಕಡುಬಡತನದಲ್ಲಿ ಬೆಳೆದವರು. ಬಡತನವನ್ನು ಅಡ್ಡಿ ಎಂದು ಭಾವಿಸದೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದವರು. ಮಂಗಳೂರು ವಿ.ವಿ.ಯ ಮೂಲಕ ಪದವಿ ವೇಳೆ ಬಂಗಾರದ ಪದಕ ಪಡೆದ ಸಾಧಕಿ ಅಕ್ಷಿತಾ ಹೆಗ್ಡೆ ಕಲ್ಯ ಸರಕಾರಿ ಪ್ರೌಢಶಾಲೆಯಲ್ಲಿ 1-10 ನೇ ತರಗತಿ, ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಶಿರ್ವ ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಹಾಗೂ ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಕಾಲೇಜಿನಲ್ಲಿ ಎಂಬಿಎ ಶಿಕ್ಷಣವನ್ನು ಮಾಡಿದ್ದರು.

Edited By :
PublicNext

PublicNext

16/08/2022 01:39 pm

Cinque Terre

41.29 K

Cinque Terre

1

ಸಂಬಂಧಿತ ಸುದ್ದಿ