ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ರಾಷ್ಟೀಯ ಪ್ರಜ್ಞೆಯ ಜಾಗೃತಿಗಾಗಿ ಹರ್ ಘರ್ ತಿರಂಗಾ ಜಾಗೃತಿ ಜಾಥಾವು ಬ್ರಹ್ಮಾವರ ಎಸ್.ಎ.ಎಸ್ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆಯಿತು.
ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಜಾಥಾ ನಡೆಯಿತು. ಕಾಲೇಜಿನಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ ಪಂಡರಿನಾಥ್ ಜಾಥಾಕ್ಕೆ ಚಾಲನೆ ನೀಡಿದರು.
ಕಾಲೇಜಿನಿಂದ ಹೊರಟ ಜಾಥಾವು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಆಕಾಶವಾಣಿ ವೃತ್ತ ಮತ್ತು ರಥಬೀದಿ ಮೂಲಕ ಸಾಗಿ ಬಂತು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ದೇವಾನಂದ ನಾಯಕ್, ಕಾಲೇಜಿನ ಪ್ರಿನ್ಸಿಪಾಲ್ ಪ್ರಸನ್ನ ಶೆಟ್ಟಿ , ವೈಸ್ ಪ್ರಿನ್ಸಿಪಾಲ್ ವಿದ್ಯಾಲತಾ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ರಘುರಾಮ್ ಶೆಟ್ಟಿ , ಮಮತಾ ಮೇರಿ ಅಮ್ಮನ್ನಾ ಮತ್ತು ಕಾಲೇಜಿನ ಶಿಕ್ಷಕರು ಸಿಬ್ಬಂದಿಗಳು ಮತ್ತು 800ರಷ್ಟು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದರು.
Kshetra Samachara
11/08/2022 01:33 pm