ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಡಿಜಿಟಲೀಕರಣದ ಪ್ರಭಾವದ ಮಧ್ಯೆ ಕಲಾವಿದ "ರವಿ" ಕಂಡ ಹೊಸ ಕನಸು !

ಜಗತ್ತು ಬಹಳಷ್ಟು ಮುಂದುವರಿದಿದೆ. ಹೆಚ್ಚಿನ ವಿಚಾರಗಳೂ ಡಿಜಿಟಲೀಕರಣಗೊಂಡಿದೆ. ಇದರ ಪ್ರಭಾವ ಕಲಾವಿದರ ಮೇಲೂ ಬೀರಿದೆ. ಇಂತಹ ಪರಿಸ್ಥಿತಿಯಲ್ಲೂ ತನ್ನೊಳಗೆ ಅಡಗಿರುವ ಕಲೆಯನ್ನು ಉಳಿಸಿ ಬೆಳೆಸುವ ರವಿ ಕಲ್ಕಟ್ಟರ ಸ್ಟೋರಿ ನೋಡಿ.

ಡಿಜಿಟಲೀಕರಣದ ಪ್ರಭಾವ ಪ್ರಿಂಟಿಂಗ್ ಕ್ಷೇತ್ರಕ್ಕೂ ತಟ್ಟಿದೆ. ಬ್ಯಾನರ್ ಬರಹ, ಗೋಡೆ ಬರಹ, ಕರಪತ್ರ ಎಲ್ಲವೂ ಈಗ ಕಂಪ್ಯೂಟರೈಸ್‌ಡ್‌. ಆದರೆ ಸಣ್ಣ ಪ್ರಾಯದಿಂದಲೇ ತಾನು ಸ್ವತಃ ಇಷ್ಟಪಟ್ಟು ಕಲಿತ ಪೈಂಟಿಂಗ್ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಸದ್ಯ ಗೋಡೆ ಬರಹ,ಬ್ಯಾನರ್ ಮುದ್ರಣಗಳೆಲ್ಲವೂ ಆಧುನೀಕರಣ ಗೊಂಡರೂ ರವಿ ಇನ್ನೂ ತನ್ನ ಕೈಚಳಕದಲ್ಲೇ ನಿರತರಾಗಿದ್ದಾರೆ.

ದ್ವಿತೀಯ ಪಿಯುಸಿ ಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡ ರವಿ ಮತ್ತೆ ತನ್ನ ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಬೇಕಾಯಿತು. ಆದರೆ ಯಾವುದೂ ಅವರ ಕೈ ಹಿಡಿದಿರಲಿಲ್ಲ.ಈ ನಡುವೆ ತಮಗೆ ಸಿಕ್ಕ ಅವಕಾಶದಲ್ಲಿ ಸ್ವತಃ ತಾನೇ ಆಸಕ್ತಿಯಿಂದ ಪೈಂಟಿಂಗ್, ಬರಹಗಳನ್ನು ಕಲಿಯತೊಡಗಿದರು.ಆದರೆ ಅವರಿಗೆ ಆಗ ಅದಕ್ಕೆ ಸೂಕ್ತ ವೇದಿಕೆಯೂ ಸಿಕ್ಕಿರಲಿಲ್ಲ. ವೇದಿಕೆ ಸಿಗುವಷ್ಟರಲ್ಲಿ ಈ ಕ್ಷೇತ್ರವೂ ಡಿಜಿಟಲೀಕರಣಗೊಂಡಿತು.

ಧಾರ್ಮಿಕವಾಗಿಯೂ ಮುಂಚೂಣಿಯಲ್ಲಿರುವ ರವಿ ಅವರ ಕಲೆಗಳು ಇಂದು ಹಲವೆಡೆ ಜಗಮಗಿಸುತ್ತಿದೆ. ಕಲೆಯ ಮೇಲಿನ ನಿಸ್ವಾರ್ಥ ಸೇವೆಯೇ ಅವರನ್ನು ಎತ್ತರಕ್ಕೆ ಬೆಳೆಸಿದೆ.

Edited By :
PublicNext

PublicNext

09/08/2022 06:43 pm

Cinque Terre

57.62 K

Cinque Terre

0

ಸಂಬಂಧಿತ ಸುದ್ದಿ