ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ನಿಯಂತ್ರಣಕ್ಕೆ ಬಾರದ ಅಡಿಕೆ ಹಳದಿ ಎಲೆರೋಗ; ಬೇಡಿಕೆಯಿದ್ದರೂ ಬೆಳೆಯಿಲ್ಲದೇ ರೈತರು ಕಂಗಾಲು

ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಮಾರುಕಟ್ಚೆಯಲ್ಲಿ ಉತ್ತಮ ಧಾರಣೆ ಕಂಡು ಬರುತ್ತಿದೆ. ಆದರೆ ಈ ಧಾರಣೆ ಏರಿಕೆಯ ಜೊತೆಗೆ ಅಡಿಕೆಗೆ ರೋಗಗಳ ಸಮಸ್ಯೆಯೂ ಹೆಚ್ಚಾಗುತ್ತಿದೆ. ಅಡಿಕೆಗೆ ಕೊಳೆರೋಗ ಎನ್ನುವುದು ಪ್ರತೀ ವರ್ಷದ ಸಮಸ್ಯೆಯಾದರೆ, ಜಿಲ್ಲೆಯ ಹಲವು ಕಡೆಗಳಲ್ಲಿ ಕಾಣಿಸಿಕೊಂಡ ಅಡಿಕೆ ಹಳದಿ ರೋಗದ ಸಮಸ್ಯೆಗೆ ಈವರೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲಾಗಿಲ್ಲ.

ಈ ನಿಟ್ಟಿನಲ್ಲಿ ನಡೆಸಲಾದ ಕೆಲವೊಂದು ಸಂಶೋಧನೆಗಳು ಯಶಸ್ವಿಯಾದರೂ, ಸಂಪೂರ್ಣ ಸಾಧನೆಗೆ ಇನ್ನಷ್ಟು ವರ್ಷಗಳು ಕಾಯಬೇಕಾದ ಸ್ಥಿತಿಯಿದೆ. ಕರಾವಳಿ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಇದೀಗ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಈ ಹಿಂದೆ ಕಿಲೋವೊಂದಕ್ಕೆ 200 ರಿಂದ 220 ರೂಪಾಯಿಗಳ ಆಸುಪಾಸಿನಲ್ಲಿದ್ದ ಅಡಿಕೆ ಬೆಳೆ ಇದೀಗ 400-450 ರೂಪಾಯಿಗಳ ಅಂಚಿಗೆ ಬಂದು ತಲುಪಿದೆ.

ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾದಂತೆ ಅಡಿಕೆ ಗಿಡಗಳಿಗೆ ರೋಗಗಳ ಬಾಧೆಯೂ ಹೆಚ್ಚಾಗಲಾರಂಭಿಸಿದೆ. ನಿರಂತರ ಸುರಿದ ಮಳೆಯಿಂದಾಗಿ ಅಡಿಕೆ ಮರಗಳಿಗೆ ಸರಿಯಾದ ಸಮಯದಲ್ಲಿ ಬೋಡೋ ದ್ರಾವಣವನ್ನು ಸಿಂಪಡಿಸಲಾಗದೇ ಇದ್ದ ಕಾರಣ ಇದೀಗ ಗಿಡಗಳ ಹಿಂಗಾರ ಕರಟಿ ಹೋದರೆ, ಇನ್ನು ಕೆಲವು ಕಡೆಗಳಲ್ಲಿ ಸಣ್ಣ ಅಡಿಕೆಗಳು ಉದುರಲಾರಂಭಿಸಿದೆ.

ಈ ಸಮಸ್ಯೆಯ ಜೊತೆಯಲ್ಲಿ ಜಿಲ್ಲೆಯ ಕಾಣಿಯೂರು, ಮಡಪ್ಪಾಡಿ, ಸಂಪಾಜೆ, ಪೆರಾಜೆ, ಮರ್ಕಂಜ ಮೊದಲಾದ ಕಡೆಗಳಲ್ಲಿ ಅಡಿಕೆಗೆ ಹಳದಿ ಎಲೆ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರ ಸಂಪೂರ್ಣ ನಷ್ಟದಲ್ಲಿದ್ದಾನೆ. ಹಲವು‌ ಅಡಿಕೆ ಬೆಳೆಗಾರರು ಸಂಕಷ್ಟದ ಬದುಕು ಸಾಗಿಸುವಂತಾಗಿದ್ದು, ಸರಕಾರ, ಅಧಿಕಾರಿಗಳು‌ ಈ ಬಗ್ಗೆ ಗಮನಹರಿಸಬೇಕೆಂಬ ಒತ್ತಾಯವೂ‌ ಕೇಳಿಬರುತ್ತಿದೆ.

Edited By :
PublicNext

PublicNext

10/08/2022 01:45 pm

Cinque Terre

28.7 K

Cinque Terre

0

ಸಂಬಂಧಿತ ಸುದ್ದಿ