ಬಂಟ್ವಾಳ: ಜನರ ಶ್ರದ್ಧೆಗೆ ಘಾಸಿ ಮಾಡುವ ಜಾಹೀರಾತುಗಳನ್ನು ತಯಾರಿಸುವುದು ಸಲ್ಲದು ಎಂದು ಯಕ್ಷಗಾನವನ್ನು ಬಳಸಿಕೊಂಡು ಸಂಸ್ಥೆಯೊಂದು ಮಾಡಿದ ಜಾಹೀರಾತು ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪ್ರತಿಕ್ರಿಯಿಸಿದ್ದಾರೆ.
ಅವರು ಈ ಕುರಿತು ಟ್ವೀಟ್ ಮಾಡಿದ್ದು, ಯಕ್ಷಗಾನ ಕರಾವಳಿ ಜನರ ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಈ ಕಲೆಯ ಬಗ್ಗೆ ಇಲ್ಲಿಯ ಜನತೆಗೆ ಶ್ರದ್ಧೆ ಇದೆ. ಕೀಳುಮಟ್ಟದ ಜಾಹೀರಾತು ಮೂಲಕ ಜನರ ನಂಬಿಕೆಗೆ ಘಾಸಿ ಮಾಡುವುದು ಸರಿ ಅಲ್ಲ. ಕೂಡಲೇ ಜಾಹೀರಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
Kshetra Samachara
22/11/2020 07:18 pm