ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಲಾತಬೆಟ್ಟು: ಸಭಾಭವನ 'ಸುವಿಧಾ' ಲೋಕಾರ್ಪಣೆ; ಸಹಕಾರಿ ಸಪ್ತಾಹ ಸಮಾರೋಪ

ಬಂಟ್ವಾಳ: ತಾಲೂಕಿನ ಪುಂಜಾಲಕಟ್ಟೆಯಲ್ಲಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ಮೇಲಂತಸ್ತಿನಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಭಾಭವನ ಸುವಿಧಾ ಸಹಕಾರಿ ಭವನದ ಲೋಕಾರ್ಪಣೆ ಹಾಗೂ ದ.ಕ. ಜಿಲ್ಲಾ ಸಹಕಾರಿ ಸಪ್ತಾಹ ಸಮಾರೋಪ ಶುಕ್ರವಾರ ನಡೆಯಿತು.

'ಸುವಿಧಾ'ವನ್ನು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಉದ್ಘಾಟಿಸಿದರು.

ಸಹಕಾರಿ ಸಪ್ತಾಹ ಸಮಾರೋಪವನ್ನು ಉದ್ಘಾಟಿಸಿ,ಸಭಾಧ್ಯಕ್ಷತೆ ವಹಿಸಿದ 'ಸಹಕಾರಿ ರತ್ನ' ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರನ್ನು ಮೊದಲಿಗೆ ಗುರುತಿಸಿದ ಜಿಲ್ಲೆ ನಮ್ಮದು, ಆರ್ಥಿಕ ಸೌಲಭ್ಯ ಒದಗಿಸಿ ಜೀವನ ಸದೃಢಗೊಳಿಸುವ ಸಹಕಾರಿ ಕ್ಷೇತ್ರದಿಂದಾಗಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಯಾವನೇ ರೈತ ಆರ್ಥಿಕ ಹಿನ್ನಡೆಯಿಂದ ಆತ್ಮಹತ್ಯೆಗೆ ಶರಣಾದ ಘಟನೆ ನಡೆಯದಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಸಹಕಾರಿ ಕ್ಷೇತ್ರ ಮೂಲಕ ರಾಜ್ಯಾದ್ಯಂತ ಜನೌಷಧಿ ಕೇಂದ್ರ ತೆರೆಯುವ ಚಿಂತನೆ ಇದ್ದು, ಈಗಾಗಲೇ 500 ಕೇಂದ್ರಗಳ ಬೇಡಿಕೆ ಇದೆ, ಈ ಸಂದರ್ಭ ಪಿಲಾತಬೆಟ್ಟು ವ್ಯ.ಸೇ.ಸ.ಸಂಘಕ್ಕೆ ಜನೌಷಧಿ ಕೇಂದ್ರ ನೀಡುವುದಾಗಿ ಪ್ರಕಟಿಸಿದರಲ್ಲದೆ, ಸಭಾಭವನದ ಅಭಿವೃದ್ಧಿಗೆ ಐದು ಲಕ್ಷ ರೂ. ಘೋಷಿಸಿದರು. ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ಸ್ವಾಗತಿಸಿದರು.

Edited By : Nagaraj Tulugeri
Kshetra Samachara

Kshetra Samachara

20/11/2020 06:58 pm

Cinque Terre

10.17 K

Cinque Terre

0

ಸಂಬಂಧಿತ ಸುದ್ದಿ