ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಳುನಾಡ ಬಿರುವೆರ್ ಸುರತ್ಕಲ್, ಬೆದ್ರ ಸಂಘಟನೆಯಿಂದ ಆರ್ಥಿಕ ನೆರವು

ಮೂಡುಬಿದಿರೆ: ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಮತ್ತು ಟೀಮ್ ತುಳುನಾಡ ಬಿರುವೆರ್ ಬೆದ್ರ ಟೀಮ್ ನ ಸದಸ್ಯರು ಎರಡು ಅಶಕ್ತ ಕುಟುಂಬಗಳಿಗೆ ಧನಸಹಾಯ ಮಾಡಿದ್ದಾರೆ.

ಕಾನ್ಸರ್‍ನಿಂದ ಬಳಲುತ್ತಿರುವ ಬಾವನಿ ಕಲ್ಲಮುಂಡ್ಕೂರು, ಅನಾರೋಗ್ಯದಿಂದ ಬಳಲುತ್ತಿರುವ ವನಜ ಬನ್ನಡ್ಕ ಅವರಿಗೆ ಚಿಕಿತ್ಸೆಗಾಗಿ ಸಂಘಟನೆಗಳಿಂದ ಆರ್ಥಿಕ ನೆರವು ನೀಡಲಾಯಿತು.

ತುಳುನಾಡ ಬಿರುವೆರ್ ಸಂಘಟನೆಯ ಸ್ಥಾಪಕ ಅಧ್ಯಕ್ಷ ಲೋಕೇಶ್ ಕೋಡಿಕೆರೆ, ಅಧ್ಯಕ್ಷ ವಿಶ್ವನಾಥ್ ಕೋಡಿಕೆರೆ, ಬೆದ್ರ ಘಟಕದ ಸದಸ್ಯರಾದ ರಾಜೇಶ್ ಪೂಜಾರಿ, ದಿನೇಶ್ ಕುಮಾರ್, ರಂಜಿತ್ ಪೂಜಾರಿ, ಸಂತೋಷ್ ಕೋಟ್ಯಾನ್, ಮುರಳಿದರ್ ಕೋಟ್ಯಾನ್ ಸಹಿತ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು

Edited By : Nagaraj Tulugeri
Kshetra Samachara

Kshetra Samachara

06/11/2020 12:04 pm

Cinque Terre

6.54 K

Cinque Terre

0

ಸಂಬಂಧಿತ ಸುದ್ದಿ