ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಹಿರಿಯ ಪತ್ರಕರ್ತ ಸೂರ್ಯನಾರಾಯಣ ರಾವ್ ಪೂವಳ ಇನ್ನಿಲ್ಲ

ಬಂಟ್ವಾಳ: ಇಪ್ಪತ್ತೈದು ವರ್ಷಗಳಿಗಿಂತಲೂ ಅಧಿಕ ಕಾಲ ಪತ್ರಕರ್ತರಾಗಿ ಬಂಟ್ವಾಳದಿಂದ ಕರ್ತವ್ಯ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕಲ್ಲಡ್ಕ ಸಮೀಪ ಅಮ್ಟೂರು ಪೂವಳ ನಿವಾಸಿ ಸೂರ್ಯನಾರಾಯಣ ರಾವ್ ಪೂವಳ (51) ಅಲ್ಪಕಾಲದ ಅಸೌಖ್ಯದ ಬಳಿಕ ಶುಕ್ರವಾರ ಮುಂಜಾವ ಸ್ವಗೃಹದಲ್ಲಿ ನಿಧನರಾದರು. ‌ ಅವರಿಗೆ ತಾಯಿ, ಪತ್ನಿ ಇದ್ದಾರೆ. ಕಳೆದೆರಡು ತಿಂಗಳಿಂದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ನಿನ್ನೆಯಷ್ಟೇ ಡಿಸ್ಚಾರ್ಜ್ ಆಗಿದ್ದರು. ಮುಂಗಾರು ಪತ್ರಿಕೆ ಸಹಿತ ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು, ಬಳಿಕ ಸುದೀರ್ಘ ಕಾಲ ಬಂಟ್ವಾಳದಿಂದ ಕನ್ನಡ ಜನಾಂತರಂಗ, ಕರಾವಳಿ ಅಲೆ ಪತ್ರಿಕೆಗಳ ವರದಿಗಾರರಾಗಿ ಕೆಲಸ ಮಾಡಿದ್ದರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಹಲವು ವರ್ಷಗಳ ವರೆಗೆ ದುಡಿದಿದ್ದ ಅವರ ನಿಧನಕ್ಕೆ ಸಂಘ ಸಂತಾಪ ಸೂಚಿಸಿದೆ.

Edited By : Nagaraj Tulugeri
Kshetra Samachara

Kshetra Samachara

06/11/2020 08:51 am

Cinque Terre

16.05 K

Cinque Terre

4

ಸಂಬಂಧಿತ ಸುದ್ದಿ