ಬಜಪೆ: ಹರಿಯುತ್ತಿರುವ ನೀರಿನ ಕಾಲುವೆಗೆ ಕಂಪೆನಿಗಳ ವಿಷಯುಕ್ತ ಪದಾರ್ಥ ಸೇರಿದ ಪರಿಣಾಮ ಮೀನುಗಳು ಸತ್ತು ಬಿದ್ದ ಘಟನೆ ನಡೆದಿದೆ. ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಯರ್ ಕಟ್ಟೆ ಗಾಣದ ಮನೆ ಬಳಿಯ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.
ಪೆರ್ಮುದೆಯ ಆಸು ಪಾಸಿನಲ್ಲಿ ಕೆಲ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಆ ವಿಷಕಾರಿ ಪದಾರ್ಥಗಳು ಸೋರಿಕೆಯಾಗಿ ತೋಡಿನ ನೀರಿಗೆ ಸೇರಿಕೊಂಡ ಪರಿಣಾಮ ಮೀನುಗಳು ಸತ್ತುಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿಂದೆಯೂ ವಿಷಯುಕ್ತ ಪದಾರ್ಥ ಹರಿಯ ಬಿಟ್ಟ ಕಾರಣ ಮೀನುಗಳ ಸಾವು ಸಂಭವಿಸಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಶ್ರೀಮತಿ ಮಹೇಶ್ವರಿ ಹಾಗೂ ರಮೇಶ್ ಅವರು ಭೇಟಿ ನೀಡಿ ನೀರಿನ ಮಾದರಿ ಪರೀಕ್ಷೆಗಾಗಿ ಪರಿಶೀಲನೆಗೆ ನೀರನ್ನು ಪಡೆದುಕೊಂಡಿದ್ದಾರೆ. ಪದೇ ಪದೇ ಈ ಘಟನೆ ಮರುಕಳಿಸುತ್ತಿದ್ದು, ಸಂಬಂಧಪಟ್ಟ ಪೆರ್ಮುದೆ ಗ್ರಾಮ ಪಂಚಾಯತ್ ಇತ್ತ ಕಡೆ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
29/09/2022 03:03 pm