ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೋಡದಲ್ಲಿ ಮೂಡಿದ ಗಣಪನನ್ನು ಸೆರೆ ಹಿಡಿದ ಬಾಲಕ!

ಉಡುಪಿ: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಉಡುಪಿ ಕೃಷ್ಣಮಠದ ರಾಜಾಂಗಣ ಪರಿಸರದ ಮುಕುಂದಕೃಪಾ ಶಾಲೆಯ ಆಗಸದಲ್ಲಿ ಕೆಲವೇ ಸೆಕೆಂಡಿನಷ್ಟು ಹೊತ್ತು ಮೂಡಿಬಂದ ವಿನಾಯಕನನ್ನು ಬಾಲಕನೊಬ್ಬ ಕ್ಷಣಮಾತ್ರದಲ್ಲಿ ಸೆರೆಹಿಡಿದು ಗಮನ ಸೆಳೆದಿದ್ದಾನೆ.

ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸದಸ್ಯ ,ಪ್ರಸ್ತುತ ಉಡುಪಿ ಮುಕುಂದಕೃಪಾ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿರುವ ಫೊಟೋಗ್ರಫಿಯಲ್ಲಿ ಅತೀವ ಆಸಕ್ತಿ ಹೊಂದಿದ ದೀಪೇಶ್ ದೀಪಕ್ ಶೆಣೈ ಈ ಚಿತ್ರವನ್ನು ಸೆರೆ ಹಿಡಿದಿದ್ದಾನೆ. ಈ ಹುಡುಗನ ಪ್ರತಿಭೆ ಮತ್ತು ಸಮಯ ಪ್ರಶ್ನೆಗೆ ಮೆಚ್ಚುಗೆಗಳು ವ್ಯಕ್ತವಾಗಿವೆ.

Edited By : Nagaraj Tulugeri
Kshetra Samachara

Kshetra Samachara

29/08/2022 04:35 pm

Cinque Terre

5.17 K

Cinque Terre

0

ಸಂಬಂಧಿತ ಸುದ್ದಿ