ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ವಾಮನ ಮುದ್ರಿಕೆಯ ಕಲ್ಲುಗಳು ಪತ್ತೆ

ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಪಂ ವ್ಯಾಪ್ತಿಯ ನೇರಳಕಟ್ಟೆ ಅರಳಿಕಟ್ಟೆಯ ಬಾವಿಕಟ್ಟೆಯ ಬಳಿ ಹಾಗೂ ನೇರಳಕಟ್ಟೆಯ ಜಾಡ್ಕಟ್ಟು ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಮಿಪ ವಾಮನ ಮುದ್ರಿಕೆಯ ಕಲ್ಲುಗಳು ಪತ್ತೆಯಾಗಿವೆ.

ಶೈವರು, ವೈಷ್ಣವರು, ಜೈನರ ಆರಾಧನೆಗೆ ಸಂಬಂಧಿಸಿದ ಹಾಗೂ ಅವರ ಆರಾಧನೆಗೆ ಗಡಿಗಳನ್ನು ಗುರುತಿಸುವುದು ಸಹಜ. ಶೈವರ ಗಡಿಗಳಿಗೆ ಲಿಂಗ ಮುದ್ರಿಕೆ ಕಲ್ಲು ಅಥವಾ ಶೈವ ಮುದ್ರಿಕೆ ಕಲ್ಲು, ವೈಷ್ಣವರ ಗಡಿಗಳಿಗೆ ವಾಮನ ಮುದ್ರಿಕೆ ಕಲ್ಲು, ಜೈನರ ಗಡಿಗಳಿಗೆ ಮುಕ್ಕೋಡೆ ಕಲ್ಲುಗಳನ್ನು ಹಾಕುತ್ತಿದ್ದರು. ಈ ಮೂಲಕ ಬಹಳ ಸ್ಪಷ್ಟವಾಗಿ ಅವರವರ ಗಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿತ್ತು ಎನ್ನಲಾಗಿದೆ.

ನೇರಳಕಟ್ಟೆಯ ಎರಡು ವಾಮನ ಮುದ್ರಿಕೆಯ ಕಲ್ಲುಗಳಲ್ಲಿ ಸೂರ್ಯ ಚಂದ್ರ ಇರುವ ತನಕ ಅಜರಾಮರವಾಗಿರಲಿ ಎಂದು ಸಂದೇಶ ಸಾರುವಂತಹ ಸೂರ್ಯ ಹಾಗೂ ಚಂದ್ರ ಶಿಲ್ಪಕಲೆಯೊಂದಿಗೆ ವ್ಯಕ್ತಿ ಅಂದರೆ ವಾಮನ ಅವರ ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಕಮಂಡಲವಿದ್ದು ಇದು ವಾಮನ ಶಿಲ್ಪಕಲೆಯಲ್ಲಿ ಸಹಜವಾಗಿ ಕಂಡುಬರುತ್ತದೆ.

ಅಂತೆಯೇ ವಾಮನ ಮುದ್ರಿಕೆಯ ಕಲ್ಲಿನ ಅಣತಿ ದೂರದಲ್ಲಿ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನವಿದೆ. ಈ ವಾಮನ ಮುದ್ರಿಕೆ ಕಲ್ಲು ಶ್ರೀಲಕ್ಷ್ಮೀ ವೆಂಕಟರಮಣ ದೇಗುಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಿದೆ. ಈ ಹಿಂದೆ ನೇರಳಕಟ್ಟೆಯ ಬಾವಿಕಟ್ಟೆ ಬಳಿ, ಕಂದಾವರದ ಶ್ರೀವೀರಾಂಜನೇಯ ದೇವಾಲಯದ ಬಳಿ, ನಂದ್ರೋಳಿ ಶ್ರೀಲಕ್ಷ್ಮೀನಾರಾಯಣ ದೇವಾಲಯದ ಬಳಿ ವಾಮನ ಮುದ್ರಿಕೆ ಕಲ್ಲು ಕಂಡು ಬಂದಿತ್ತು.ಈ ವಾಮನ ಮುದ್ರಿಕೆ ಕಲ್ಲುಗಳನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬನ್ನೂರು ಹಾಗೂ ಸಂತೋಷ್ ನೇರಳಕಟ್ಟೆ ಇವರು ಪತ್ತೆ ಹಚ್ಚಿದ್ದು ಇವರಿಗೆ ಕರ್ಕುಂಜೆ ಗ್ರಾಪಂ

ಉಪಾಧ್ಯಕ್ಷ ಸಂತೋಷ್ ಪೂಜಾರಿ, ಸುಕುಮಾರ್ ನೇರಳಕಟ್ಟೆ, ಜಯರಾಮ ನೇರಳಕಟ್ಟೆ, ಗಿರಿ ಪೂಜಾರಿ ನೇರಳಕಟ್ಟೆ ಸಹಕರಿಸಿದ್ದರು.

Edited By : PublicNext Desk
Kshetra Samachara

Kshetra Samachara

27/08/2022 08:57 pm

Cinque Terre

3.74 K

Cinque Terre

0

ಸಂಬಂಧಿತ ಸುದ್ದಿ