ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಸುಂಕದಕಟ್ಟೆಯಲ್ಲಿ ಧರೆಗುರುಳಿದ ಬಹುಮಹಡಿ ಕಟ್ಟಡ; ಮುನ್ನೆಚ್ಚರಿಕೆಯಿಂದ ತಪ್ಪಿದ ದುರಂತ !

ಸುಳ್ಯ: ಕೇರಳ- ಕರ್ನಾಟಕದ ಗಡಿ ಪ್ರದೇಶ ವರ್ಕಾಡಿ ಸಮೀಪದ ಸುಂಕದಕಟ್ಟೆ ಎಂಬಲ್ಲಿ ಕಟ್ಟಡ ಕುಸಿದು ಬಿದ್ದಿದ್ದು, ಕಟ್ಟಡದಲ್ಲಿದ್ದ ಅಂಗಡಿ, ಕಚೇರಿಗಳನ್ನು ಕಳೆದ ದಿನ ತೆರವು ಮಾಡಲಾದ ಕಾರಣ ಅದೃಷ್ಟವಶಾತ್ ದೊಡ್ಡ ಮಟ್ಟದ ಅನಾಹುತ ನಡೆದಿಲ್ಲ.

ಈ ಬಹುಮಹಡಿ ಕಟ್ಟಡದಲ್ಲಿ ಎರಡು ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡಿದ್ದರಿಂದ ಅಲ್ಲಿನ ನಿವಾಸಿಗಳು, ಅಂಗಡಿ- ಕಚೇರಿಗಳನ್ನು ಸ್ಥಳಾಂತರಿಸಿದ್ದರು. ವರ್ಕಾಡಿ ನಿವಾಸಿ ಸುರೇಂದ್ರ ಪೂಜಾರಿ ಎಂಬವರಿಗೆ ಸೇರಿದ ಕಟ್ಟಡ ಇದಾಗಿದೆ. ಮೂರು ಅಂತಸ್ತಿನ ಕಟ್ಟಡವನ್ನು 10 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ.

ಕಳೆದ ದಿನ ಕಟ್ಟಡದ ಕೆಳಗಿನ ಪ್ರದೇಶದಲ್ಲಿ ಭೂಕುಸಿತವಾಗಿತ್ತು. ಇದರಿಂದ ಕಟ್ಟಡ ಅಪಾಯದಂಚಿನಲ್ಲಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಈ ಕಟ್ಟಡದಲ್ಲಿ ಎರಡು ಕುಟುಂಬಗಳೂ ವಾಸವಾಗಿದ್ದವು. ಕಟ್ಟಡದಲ್ಲಿ ಟೈಲರ್ ಅಂಗಡಿ, ಪೀಠೋಪಕರಣ ಅಂಗಡಿ, ಬಿಜೆಪಿಯ ಕಚೇರಿ ಮುಂತಾದವುಗಳೂ ಕಾರ್ಯನಿರ್ವಹಿಸುತ್ತಿದ್ದವು. ಇಲ್ಲಿನ ಜನರನ್ನು ಬೇಗನೇ ಸ್ಥಳಾಂತರಿಸಿದ ಕಾರಣ ದೊಡ್ಡ ಅಪಾಯಕಾರಿ ಪರಿಸ್ಥಿತಿ ಉಂಟಾಗಿಲ್ಲ.

Edited By : Nagesh Gaonkar
PublicNext

PublicNext

07/08/2022 09:33 pm

Cinque Terre

48.32 K

Cinque Terre

0

ಸಂಬಂಧಿತ ಸುದ್ದಿ