ಕಾರ್ಕಳ: ಪಶ್ಚಿಮ ಘಟ್ಟ ಪ್ರದೇಶ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ನಾರಾವಿ ಭಾಗದಲ್ಲಿ ಆಗಸ್ಟ್ 3ರಂದು ಸಂಜೆ 4ರ ವೇಳೆಗೆ ಭಾರಿ ಸ್ಫೋಟದ ಸದ್ದು ಕೇಳಿಸಿದ್ದು, ಸತತವಾಗಿ ಮಳೆ ಸುರಿದಿದೆ. ಜೊತೆಗೆ ಸುವರ್ಣ ನದಿಯಲ್ಲಿ ಕೆಸರು ಮಿಶ್ರಿತ ನೀರು ಹರಿದಿದ್ದು,
ಸ್ಥಳೀಯರು ಜಲ ಸ್ಫೋಟವಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಈ ನದಿಯಲ್ಲಿ ಏಕಾಏಕಿ ಭಾರಿ ಕೆಸರು ನೀರಿನ ಹರಿವಿನ ಸಂದರ್ಭ ಭೂ ಕುಸಿತವಾಗಿರುವ ಸಂಶಯ ವ್ಯಕ್ತವಾಗಿದೆ. ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಬಳಿ ಹರಿಯುತ್ತಿರುವ ಸುವರ್ಣ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿ ದೇವಾಲಯ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು.
ಸ್ಥಳೀಯರು ನೀಡಿದ ಮಾಹಿತಿಯಂತೆ ಮೊದಲ ಬಾರಿಗೆ ಅಂಚಿಕಟ್ಟೆ ಸೇತುವೆ ಮುಳುಗಡೆಯಾಗಿದೆ. ಸೇತುವೆಯ ಮೇಲ್ಭಾಗ 2 ಅಡಿ ನೀರು ನಿಂತಿದ್ದು, ಒಂದು ಗಂಟೆವರೆಗೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
Kshetra Samachara
04/08/2022 10:50 pm