ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡೆಕೋಲಿನ ಮಾವಂಜಿ ಭಾಗದಲ್ಲಿ ಪ್ರತ್ಯಕ್ಷವಾದ ಕಾಡಾನೆ ಹಿಂಡು: ಕೃಷಿ ನಾಶ

ಸುಳ್ಯ; ಮಂಡೆಕೋಲು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಇಂದು ಬೆಳಿಗ್ಗೆ ಮಾವಂಜಿ ಭಾಗದಲ್ಲಿ ಪ್ರತ್ಯಕ್ಷಗೊಂಡ ಆನೆಗಳ ಹಿಂಡು ವ್ಯಾಪಕವಾಗಿ ಕೃಷಿ ಹಾನಿ ಮಾಡಿವೆ.

ಒಂದು ಮರಿ ಹಾಗು ಮೂರು ದೊಡ್ಡ ಆನೆಗಳ ಹಿಂಡು ತೋಟಕ್ಕೆ ನುಗ್ಗಿದ್ದು ಸೀತಾರಾಮ ಮಣಿಯಾಣಿ ಅವರ ತೋಟದಲ್ಲಿ ಬಾಳೆ, ತೆಂಗು ಸೇರಿ ಕೃಷಿ ಹಾನಿ ಮಾಡಿದೆ. ಅಯ್ಯಪ್ಪ ಬೆಳ್ಚಪಾಡ ಎಂಬವರ ಗದ್ದೆಯ ಮೂಲಕ ಹಾದು ಹೋಗಿದೆ. ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಹಾಳಿ ನಿರಂತರ ಮುಂದುವರಿದಿದ್ದು ಮಳೆಗಾಲ ಆರಂಭವಾದ ಬಳಿಕ ಆನೆ ಹಾವಳಿ ಇನ್ನಷ್ಟು ತೀವ್ರಗೊಂಡಿದೆ. ನಿನ್ನೆ ಸಂಜೆಯ ವೇಳೆಗೆ ಮಾವಂಜಿ ಭಾಗಕ್ಕೆ ಆನೆಗಳು ದಾಳಿಯಿಟ್ಟಿದೆ.

ಆನೆಗಳನ್ನು ಕಾಡಿಗೆ ಅಟ್ಟಿದರೂ ಮತ್ತೆ ಮರಳಿ ಬರುತ್ತಿವೆ. ಮರಿ ಆನೆಯೂ ಇರುವ ಕಾರಣ ಆನೆಗಳು ದೂರ ಸರಿಯುವುದಿಲ್ಲ. ಮತ್ತೆ ಮತ್ತೆ ಊರಿನತ್ತ ನುಗ್ಗಿ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

Edited By : Nirmala Aralikatti
Kshetra Samachara

Kshetra Samachara

18/07/2022 09:47 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ