ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕೋಟೇಶ್ವರದಲ್ಲಿ ಕೊನೆಯಾಗಿಲ್ಲ ಕಡಲ್ಕೊರೆತ: ಸ್ಥಳೀಯರು ಹೇಳುವುದೇನು?

ಕುಂದಾಪುರ: ಜಿಲ್ಲೆಯಲ್ಲಿ ನಿನ್ನೆಯಿಂದ ಮುಂಗಾರು ಮಳೆ ಬಹುತೇಕ ನಿಂತಿದೆ.ಆದರೆ ತಾಲೂಕಿನ ಕೋಟೇಶ್ವರದಲ್ಲಿ ಕಡಲ್ಕೊರೆತ ಸಮಸ್ಯೆ ಇನ್ನೂ ನಿಂತಿಲ್ಲ.ಸ್ಥಳೀಯರು ಮತ್ತು ಕಡಲತೀರದಲ್ಲಿ ಮನೆ ಮಾಡಿಕೊಂಡವರು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕೋಟೇಶ್ವರ ಗ್ರಾ.ಪಂ ವ್ಯಾಪ್ತಿಯ ಕಿನಾರ ಬೀಚ್ ರೆಸ್ಟೋರೆಂಟ್ ಹಾಗೂ ಗೋಪಾಡಿ ಮನೆ ಪರಿಸರದಲ್ಲಿ ಕಡಲ್ಕೊರೆತದಿಂದಾಗಿ ರೆಸ್ಟೋರೆಂಟ್ ನ ಗುಡಿಸಲುಗಳು ಧರೆಗುರುಳಿವೆ. ಮಾತ್ರವಲ್ಲ ,ಈ ಭಾಗದ ಪ್ರಮುಖ ಸಂಪರ್ಕ ಕೋಡಿ-ಕೋಟೇಶ್ವರ ರಸ್ತೆ ಅಪಾಯದಂಚಿನಲ್ಲಿದೆ.

ಈ ಭಾಗದ ಕಡಲತೀರದಲ್ಲಿ ತಡೆಗೋಡೆಗಳಿಗೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗಿವೆ. ಗಾಳಿ ಮಳೆಯಿಂದ ಸಮೀಪದಲ್ಲಿರುವ ಗೂಡಂಗಡಿಗಳಿಗೆ ಕಡಲಿನ ಅಲೆಗಳು ಹೊಡೆಯುತ್ತಿದ್ದು, ತಮ್ಮ ವ್ಯಾಪಾರ ವಹಿವಾಟಿಗೆ ಧಕ್ಕೆಯುಂಟಾಗಿದೆ. ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ತಕ್ಷಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದು ಲೋಡ್ ಕಲ್ಲು ಸುರಿದು ಹೋಗುತ್ತಾರೆ.ಮತ್ತೆ ಅವರ ಸುಳಿವು ಇಲ್ಲ ಅಂತಾರೆ ಸ್ಥಳೀಯರು.

ಪ್ರತಿ ಬಾರಿಯೂ ಇದೇ ಗೋಳು. ಕೇವಲ ಪ್ರಚಾರಕ್ಕಾಗಿ ಜನಪ್ರತಿನಿಧಿಗಳು ಬಂದು ಫೋಟೋಗೆ ಪೋಸ್ ನೀಡಿ ಹೋಗುತ್ತಾರೆ. ಇದರಿಂದ ಯಾವುದೇ ಪ್ರಯೋಜನ ನಮಗಿಲ್ಲ. ಚುನಾವಣೆ ಬಂದಾಗ ಜನಪ್ರತಿನಿಧಿಗಳು ಬಂದು ವೋಟ್ ಗಾಗಿ ಭಿಕ್ಷೆ ಬೇಡುತ್ತಾರೆ. ಆದರೆ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಮನಸ್ಸು ಯಾವುದೇ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಾಗಲಿ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Edited By : Manjunath H D
Kshetra Samachara

Kshetra Samachara

18/07/2022 04:52 pm

Cinque Terre

4.36 K

Cinque Terre

0

ಸಂಬಂಧಿತ ಸುದ್ದಿ