ಮುಲ್ಕಿ: ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ,ಕಟೀಲು, ಹಳೆಯಂಗಡಿ ಸೇರಿದಂತೆ ಮುಲ್ಕಿ ನಗರ ವ್ಯಾಪ್ತಿಯಲ್ಲಿ ಭಾನುವಾರ ಕೂಡ ಬಿರುಸಿನ ಮಳೆ ಮುಂದುವರಿದಿದ್ದು ಅಲ್ಪ ಸ್ವಲ್ಪ ಮಳೆ ಹಾನಿ ಸಂಭವಿಸಿದೆ.
ತಾಲೂಕಿನ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ನೀರೆ ಮಾಗಂದಡಿ ಸುಭಾಷ್ಚಂದ್ರ ಶೆಟ್ಟಿ ಎಂಬವರ ಮನೆಯ ಮಾಡಿನ ಮೇಲೆ ತೆಂಗಿನ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.
ಮುಲ್ಕಿಯ ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್,ಕಂದಾಯ ನಿರೀಕ್ಷಕ ದಿನೇಶ್ ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿರುಸಿನ ಮಳೆಯಿಂದ ಕಿಲೆಂಜೂರು,ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯಿಕುಡೆ,ಪಂಜ ಸಹಿತ ಹೆಚ್ಚಿನ ತಗ್ಗು ಪ್ರದೇಶಗಳಲ್ಲಿ ಗದ್ದೆಗಳಲ್ಲಿ ನಿಂತ ನೀರು ಇಳಿಯದೇ ಕೃಷಿಕರಿಗೆ ತೊಂದರೆಯುಂಟಾಗಿದೆ.
Kshetra Samachara
17/07/2022 07:59 pm