ಉಡುಪಿ: ಜಿಲ್ಲೆಯಲ್ಲಿ ಮಳೆ-ಗಾಳಿಯಿಂದಾಗಿ ಈ ವರ್ಷ ವ್ಯಾಪಕ ಕಡಲ್ಕೊರೆತ ಸಂಭವಿಸಿದೆ. ಸಮುದ್ರ ಪ್ರಕ್ಷುಬ್ಧಗೊಂಡು ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಜೂನ್, ಜುಲೈ ತಿಂಗಳ ಮಳೆಗೆ ಜಿಲ್ಲೆಯಲ್ಲಿ ಒಟ್ಟು 1,840 ಮೀಟರ್ ಉದ್ದದಷ್ಟು ಕಡಲ್ಕೊರೆತ ಸಂಭವಿಸಿದೆ. ತಾತ್ಕಾಲಿಕ ಕಾಮಗಾರಿಗಾಗಿ 13.82 ಕೋ. ರೂ. ಅಂದಾಜು ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೈಂದೂರು ತಾಲೂಕಿನ ಮರವಂತೆ ಗ್ರಾಮದಲ್ಲಿ 350 ಮೀ., ಕಿರಿಮಂಜೇಶ್ವರ ಗ್ರಾಮದ ಆದ್ರಗೋಳಿ ಸಮೀಪ 200 ಮೀ., ಕುಂದಾಪುರದ ಗುಜ್ಜಾಡಿ ಹೊಸಾಡು ಗ್ರಾಮದ ಕಂಚುಗೋಡಿನಲ್ಲಿ 250 ಮೀ., ಕಾಪು ತಾಲೂಕಿನ ಮುಳೂರಿನಲ್ಲಿ 200 ಮೀ., ಕೈಪುಂಜಾಲುವಿನಲ್ಲಿ 240 ಮೀ., ಬ್ರಹ್ಮಾವರ ಕೋಟ ಪಡುಕರೆಯಲ್ಲಿ 130 ಮೀ. ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಕುತ್ಪಾಡಿ ಕಡಲ ತೀರದಲ್ಲಿ 200 ಮೀ.ನಷ್ಟು ಕಡಲ್ಕೊರೆತ ಸಂಭವಿಸಿದೆ. ಕಡಲ್ಕೊರೆತದಿಂದಾಗಿ ತೀರದಲ್ಲಿದ್ದ ಬಹುತೇಕ ತೆಂಗಿನ ಮರಗಳು ಧರೆಗೆ ಉರುಳಿವೆ. ರಸ್ತೆ ಹಾಗೂ ಮೀನುಗಾರಿಕೆ ದೋಣಿಗಳಿಗೆ ಹಾನಿಯಾಗಿವೆ.
Kshetra Samachara
16/07/2022 12:19 pm