ಸುಳ್ಯ: ತಾಲೂಕಿನ ತೊಡಿಕಾನ, ಗೂನಡ್ಕ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ 10.08 ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಹಲವರಿಗೆ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ಹೇಳಿದ್ದಾರೆ.
ಈ ಸದ್ದು ಹಾಗೂ ಕಂಪನವು ಅರಂತೋಡು, ಸಂಪಾಜೆ, ಗೂನಡ್ಕ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಕೇಳಿದೆ. ಕಳದ ಕೆಲವು ದಿನಗಳಿಂದ ಆಗಾಗ ಭೂಮಿ ಕಂಪಿಸಿದೆ. ಸುಮಾರು 10 ಕ್ಕೂ ಅಧಿಕ ಬಾರಿ ಇದುವರೆಗೆ ಭೂಮಿ ಕಂಪಿಸಿದೆ.ಜನರಿಗೆ ಆತಂಕ ಇನ್ನಷ್ಟು ಹೆಚ್ಚಾಗಿದೆ.
Kshetra Samachara
15/07/2022 01:54 pm