ಬಜಪೆ: ಭಾರೀ ಗಾಳಿ- ಮಳೆಗೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬೆತ್ತಿಗುತ್ತು ಎಂಬಲ್ಲಿ ತೋಟದ ಅಂಚಿನ ಗುಡ್ಡ ಕುಸಿದು ಸಮೀಪದ ತೋಡಿಗೆ ಬಿದ್ದ ಪರಿಣಾಮ ತೋಡಿನ ನೀರು ಅಡಿಕೆ ತೋಟ ಹಾಗೂ ಭತ್ತದ ಕೃಷಿ ಗದ್ದೆಗೆ ನುಗ್ಗಿ ಅಪಾರ ಹಾನಿಯಾಗಿದೆ.
ಕಬೆತ್ತಿಗುತ್ತು ಸಮೀಪದ ತೋಡಿನಲ್ಲಿ ಸುಂಕದಕಟ್ಟೆಯ ಅಂಬಿಕಾನಗರ, ಪಾಲಿಟೆಕ್ನಿಕ್ ಹಾಗೂ ಬಿಎಮ್ ಎ ಗಳ ಚರಂಡಿಯ ನೀರು ಹರಿಯುತ್ತದೆ. ನೀರು ರಭಸವಾಗಿ ಹರಿಯುತ್ತಿದ್ದು, ಗುಡ್ಡ ಕುಸಿದ ಪರಿಣಾಮ ತೋಡಿನ ಒಂದಂಚು ನೀರಿನಲ್ಲಿ ಕೊಚ್ಚಿ ಹೋಗಿದೆ.
10 ಎಕರೆಯಲ್ಲಿನ ಅಡಿಕೆ ತೋಟ ಹಾಗೂ 8 ಎಕರೆಯ ಭತ್ತದ ಕೃಷಿಯ ಗದ್ದೆ ಜಲಾವೃತವಾಗಿದ್ದು, ಸಮೀಪವೇ ಸುಮಾರು 20 ಮನೆಗಳಿವೆ. ಸ್ಥಳಕ್ಕೆ ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಕರಣಿಕರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Kshetra Samachara
14/07/2022 06:03 pm