ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ಬೀಸಿದ ಬಾರೀ ಗಾಳಿ ಹಾಗೂ ಮಳೆಯಿಂದ ಅಪಾರ ನಷ್ಟ ಉಂಟಾಗಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.
ತಾಲೂಕು ವ್ಯಾಪ್ತಿಯ ಕಿಲ್ಪಾಡಿ ದೈವಸ್ಥಾನದ ಬಳಿ ಬೆಳಿಗ್ಗೆ ನಾಲ್ಕು ಗಂಟೆಗೆ ಬೀಸಿದ ಗಾಳಿ ಮಳೆಗೆ ಮರ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ದರಶಾಹಿಯಾಗಿದ್ದು ರಸ್ತೆ ಸಂಚಾರ ಹಾಗೂ ವಿದ್ಯುತ್ ವ್ಯತ್ಯಯಗೊಂಡಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಹಾಗೂ ಮೆಸ್ಕಾಂ ಶಾಖಾಧಿಕಾರಿ ವಿವೇಕಾನಂದ ಶೆಣೈ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುತ್ತಿದ್ದಾರೆ.
ಮುಲ್ಕಿ ನ ಪಂ ವ್ಯಾಪ್ತಿಯ ಪಳ್ಳಿಗುಡ್ಡೆ ವೀರಭದ್ರ ದೇವಸ್ಥಾನದ ಚಡಾವು ರಸ್ತೆಗೆ ಭಾರೀ ಗಾತ್ರದ ಮರ ಬಿದ್ದು ಸಂಚಾರ ಅಸ್ತವ್ಯಸ್ತ ಉಂಟಾಯಿತು. ಕೂಡಲೇ ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಹಾಗೂ ಪಂಚಾಯತ್ ಸದಸ್ಯ ಪುತ್ತುಭಾವ ಸೂಚನೆ ಮೇರೆಗೆ ನ.ಪಂ.ಸಿಬ್ಬಂದಿ ಪ್ರಕಾಶ್ ಹಾಗೂ ನವೀನ್ ಚಂದ್ರ ನೇತೃತ್ವದಲ್ಲಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರ ಮುಕ್ತಗೊಳಿಸಲಾಗಿದೆ.
ನಪಂ ವ್ಯಾಪ್ತಿಯ ಕಾರ್ನಾಡ್ ದರ್ಗಾ ರೋಡ್ ಬಳಿ ಲತೀಫಾ ಎಂಬವರ ಮನೆಗೆ ಹಲಸಿನ ಮರ ಬಿದ್ದು ಹಾನಿಯಾಗಿ ನಷ್ಟ ಸಂಭವಿಸಿದೆ. ತಾಲೂಕು ವ್ಯಾಪ್ತಿಯ ಕಿನ್ನಿಗೊಳಿ, ಹಳೆಯಂಗಡಿ, ಪಕ್ಷಿಕೆರೆ, ಕವಾತ್ತಾರು, ಬಳ್ಕುಂಜ ಗ್ರಾಮಗಳಲ್ಲಿ ಸಣ್ಣಪುಟ್ಟ ಹಾನಿಯಾಗಿದೆ.
Kshetra Samachara
14/07/2022 12:00 pm