ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಗೃಹಪ್ರವೇಶಕ್ಕೂ ಮುನ್ನವೇ.. ನೆಲಸಮವಾಯ್ತು ಮನೆ

ಸುಳ್ಯ: ಭಾರೀ ಮಳೆಯಿಂದಾಗಿ ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆಯೊಂದು ನೆಲಸಮವಾಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಬಳಿ ಮೂರು ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಮೂಡಿತ್ತು. ನಂತರ ಬಿರುಕು ಬಿಟ್ಟಿದ್ದ ಗೋಡೆ ದುರಸ್ತಿ ಕೆಲಸ ಮಾಡಲಾಗಿ ಗೃಹ ಪ್ರವೇಶಕ್ಕೆ ಸಜ್ಜು ಮಾಡಲಾಗಿತ್ತು.

ಜುಲೈ 18ರಂದು ಗೃಹಪ್ರವೇಶಕ್ಕೆ ದಿನಾಂಕ ನಿಗಧಿಪಡಿಸಲಾಗಿತ್ತು. ಎಲ್ಲಾ ತಯಾರಿಯನ್ನು ಮಾಡಲಾಗಿತ್ತು. ಆದರೆ ಮಳೆಯ ಆರ್ಭಟಕ್ಕೆ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ.

ಕಷ್ಟಪಟ್ಟು ಕಟ್ಟಿದ್ದ ಮನೆ ಗೃಹಪ್ರವೇಶಕ್ಕೆ ಮೊದಲೇ ನೆಲಸಮವಾಗಿದ್ದರಿಂದ ಮನೆಯವರು ಕಂಗಾಲಾಗಿದ್ದಾರೆ.

Edited By : Nagesh Gaonkar
PublicNext

PublicNext

13/07/2022 05:49 pm

Cinque Terre

34.97 K

Cinque Terre

1

ಸಂಬಂಧಿತ ಸುದ್ದಿ