ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಹನ್ನೊಂದು ದಿನಗಳಿಂದ ಸುರಿಯುತ್ತಿರುವ ಮಳೆ ಮುಂದುವರಿದಿದ್ದು, ಬಂಟ್ವಾಳ ತಾಲೂಕಿನಲ್ಲಿ ಹರಿಯುವ ನೇತ್ರಾವತಿ ನದಿ ಅಪಾಯದ ಮಟ್ಟಕ್ಕೆ ಸನಿಹ ತಲುಪಿದೆ. ಇದರಿಂದ ಬಂಟ್ವಾಳದಲ್ಲಿ ನೆರೆಭೀತಿ ಎದುರಾಗಿದೆ.
ಭಾನುವಾರ ಬೆಳಗ್ಗೆ 8.4 ಮೀಟರ್ ಎತ್ತರದಲ್ಲಿ ನದಿ ಹರಿಯುತ್ತಿದ್ದು, ಅಪಾಯದ ಮಟ್ಟ 8.5 ಆಗಿದೆ.ಇದರಿಂದ ಬಂಟ್ವಾಳ ತಾಲೂಕಿನಲ್ಲಿ ಪ್ರತಿ ಬಾರಿಯೂ ಅಪಾಯದ ಮಟ್ಟ ತಲುಪಿದಾಗ ನೆರೆ ಭೀತಿ ಎದುರಿಸುವ ಜಾಗಗಳಾದ ಬಡ್ಡಕಟ್ಟೆ, ಬಸ್ತಿಪಡ್ಪು, ಆಲಡ್ಕ, ನಾವೂರು ಸಹಿತ ಹಲವು ಪ್ರದೇಶಗಳಲ್ಲಿ ಈಗ ಪ್ರವಾಹದ ಆತಂಕ ಎದುರಾಗಿದೆ.
Kshetra Samachara
10/07/2022 07:55 am