ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗ್ತಿದೆ ಇಂದು ಕೂಡಾ ಮಂಗಳೂರಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ.
ಮೊದಲ ಬಾರಿಗೆ ಮಂಗಳೂರಿನ ಪಿಲಿಕುಳ ಮೃಗಾಲಯಕ್ಕೆ ನುಗ್ಗಿದ ಮಳೆ ನೀರು ನುಗ್ಗಿದೆ.ಮಂಗಳೂರು ಹೊರವಲಯ ಪಿಲಿಕುಲಜೈವಿಕ ಉದ್ಯಾನವನದಲ್ಲಿ ನೆರೆ ಭೀತಿಎದುರಾಗಿದೆ.ಮಂಗಳೂರಿನಲ್ಲಿ ಭಾರೀ ಮಳೆಗೆ ಪಿಲಿಕುಳ ಮೃಗಾಲಯ ಜಲಾವೃತಗೊಂಡಿದೆ.
ಮಂಗಳೂರಿನ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೆ ನುಗ್ಗಿದ ಭಾರೀ ಪ್ರಮಾಣದ ನೀರು ಎಕರೆಗಟ್ಟಲೆ ಇರೋ ಪಿಲಿಕುಳ ಮೃಗಾಲಯದ ಬಹುತೇಕ ಭಾಗ ಮುಳುಗಡೆಯಾಗಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಪಿಲಿಕುಳದಲ್ಲಿ ಭಾರೀ ನೆರೆ ಪರಿಸ್ಥಿತಿ ಎದುರಾಗಿದೆ. 2004ರಲ್ಲಿ ಉದ್ಘಾಟನೆ ಬಳಿಕ ಇದೇ ಮೊದಲ ಬಾರಿಗೆ ನೆರೆ ಪರಿಸ್ಥಿತಿ ಬಂದಿದೆ.
ಭಾರೀ ಪ್ರಮಾಣದ ನೀರು ಹರಿದು ಬಂದು ಪಿಲಿಕುಳದ ಪಾದಚಾರಿ ಮಾರ್ಗ ಬಂದ್ ಅಗಿದ್ದು ಮೃಗಾಲಯಕ್ಕೆ ನೀರು ನುಗ್ಗಿ ಕೆಲ ಪ್ರಾಣಿಗಳ ವಾಸ್ತವ್ಯಕ್ಕೆ ಸಮಸ್ಯೆ ಉಂಟಾಗಿದೆ. ಇದೀಗ ಪ್ರಾಣಿಗಳಿಗೆ ಪಕ್ಕದಲೇ ವೇರೆ ವ್ಯವಸ್ಥೆ ಮಾಡಲಾಗಿದೆ.
Kshetra Samachara
09/07/2022 09:05 pm