ಕಾಪು: ಕಾಪು ತಾಲೂಕಿನಾದ್ಯಂತ ಮಳೆ ತೀವ್ರಗೊಂಡಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಾಪು, ಇನ್ನಂಜೆ, ಬೆಳಪು, ಪಣಿಯೂರು, ಕುಂಜೂರು, ಮಜೂರು, ಕರಂದಾಡಿ, ಉಳಿಯಾರು, ಜಲಂಚಾರು, ಪಾಂಗಾಳ ಸಹಿತ ವಿವಿಧೆಡೆ ನೆರೆಯ ಭೀತಿ ಎದುರಾಗಿದೆ.
ವಿವಿಧೆಡೆ ತಗ್ಗು ಪ್ರದೇಶಗಳಲ್ಲಿರುವ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು ನೂರಾರು ಎಕರೆ ಭತ್ತದ ಕೃಷಿಗೆ ಸಂಪೂರ್ಣ ಹಾನಿಯುಂಟಾಗಿದೆ. ಕರಂದಾಡಿ - ಕಲ್ಲುಗುಡ್ಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕಾಪು - ಇನ್ನಂಜೆ ರಸ್ತೆ ಸಂಚಾರಕ್ಕೂ ನೆರೆ ಅಡ್ಡಿಯಾಗಿದೆ. ಶಿರ್ವ, ಕಾಪು, ಕುಂಜೂರು ಸಹಿತ ವಿವಿಧ ಕಡೆಗಳಲ್ಲಿನ ನೆರೆ ಪೀಡಿತ ಪ್ರದೇಶಗಳಿಗೆ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಸಹಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
09/07/2022 07:40 pm