ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಿಕಲ್ಲು ಸಮೀಪ ಭೂಕುಸಿತ: ಮಣ್ಣಿನಡಿ ಸಿಲುಕಿದ ಮೂವರಲ್ಲಿ ಓರ್ವನ ರಕ್ಷಣೆ

ಬಂಟ್ವಾಳ: ಧಾರಾಕಾರ ಮಳೆಗೆ ಪಂಜಿಕಲ್ಲು ಸಮೀಪ ನೇಲ್ಯಪಲ್ಕೆ ಸಮೀಪ ಕಜೆಬೈಲು ಎಂಬಲ್ಲಿ ಭೂಕುಸಿತ ಉಂಟಾಗಿ ನಾಲ್ವರು ಕೇರಳ ಮೂಲದ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಅದರಡಿ ಸಿಲುಕಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ. ಅವರಲ್ಲಿ ಜೋನಿ ಎಂಬಾತನನ್ನು ಹೊರತೆಗೆಯಲಾಗಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ವ್ಯಕ್ತಿಯೋರ್ವರಿಗೆ ಸೇರಿದ ಶೆಡ್ ರೀತಿಯ ಮನೆ ಮೇಲೆ ಮಣ್ಣು ಜರಿದು ಈ ಘಟನೆ ಸಂಭವಿಸಿದೆ. ಮನೆಯಲ್ಲಿ ಐವರು ವಾಸಿಸುತ್ತಿದ್ದು, ಅವರ ಪೈಕಿ ಓರ್ವ ಹೊರಗಿದ್ದರು. ನಾಲ್ವರು ಮನೆಯೊಳಗಿದ್ದರು. ಈ ಸಂದರ್ಭ ಭೂಕುಸಿತ ಉಂಟಾಗಿದೆ. ಕೂಡಲೇ ಸ್ಥಳೀಯರು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ, ಒಬ್ಬರನ್ನು ರಕ್ಷಿಸಿದ್ದು, ಆಂಬುಲೆನ್ಸ್ ನಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನೂ ಮೂವರು ಅದರಡಿ ಸಿಲುಕಿದ್ದು ಅವರನ್ನು ಹೊರತೆಗೆಯುವ ಪ್ರಯತ್ನ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

06/07/2022 10:31 pm

Cinque Terre

4.26 K

Cinque Terre

0

ಸಂಬಂಧಿತ ಸುದ್ದಿ