ಉಡುಪಿ: ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದ ಹಲವೆಡೆ
ರಸ್ತೆಗಳು ಜಲಾವೃತಗೊಂಡಿವೆ. ಈ ನಡುವೆ ಕರಾವಳಿಯಲ್ಲಿ ಹಳ್ಳಿ, ಹಳ್ಳಿಗೂ ಸಂಪರ್ಕ ಕಲ್ಪಿಸುವ ಖಾಸಗಿ ಬಸ್‌ಗಳು ಮಳೆಯ ನಡುವೆಯೂ ಸಂಚಾರ ಕಲ್ಪಿಸುತ್ತಿದೆ. ಪ್ರಯಾಣಿಕರನ್ನು ಸೇಫ್ ಆಗಿ ಮನೆಮನೆಗೆ ತಲುಪಿಸುತ್ತಿವೆ. ಜಲಾವೃತಗೊಂಡ ರಸ್ತೆಗಳ ಮಧ್ಯೆಯೂ ಬಸ್ ಸಂಚರಿಸುತ್ತಿದ್ದು, ನೀರನ್ನು ಸೀಳಿಕೊಂಡು ಬಸ್‌ಗಳು ಸಂಚಾರ ಮಾಡುತ್ತಿರುವ ದೃಶ್ಯ ನೋಡುಗರ ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯ ವಿವಿಧೆಡೆ ಕೃತಕ ನೆರೆ ನೀರಿನಲ್ಲಿ ಸಂಚಾರ ಮಾಡುತ್ತಿರುವ ಬಸ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ.
Kshetra Samachara
06/07/2022 07:16 pm