ಕಾಪು: ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ತೊಟ್ಟಂ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಹತ್ತಕ್ಕೂ ಅಧಿಕ ತೆಂಗಿನ ಮರಗಳು ಸಮುದ್ರಕ್ಕೆ ಉರುಳಿ ಬಿದ್ದಿವೆ.
ಪುರಸಭಾ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡ್‌ನ ಸುನಂದಾ ಪೂಜಾರ್ತಿ, ದೇವಿಪ್ರಸಾದ್, ಬಾಬು ಶೆಟ್ಟಿ ಅವರ ಮನೆ ಬಳಿ ಹಾಗೂ ಖಾಸಗಿ ಗೆಸ್ಟ್ ಹೌಸ್ ಬಳಿ ಕಡಲ್ಕೊರೆತ ತೀವ್ರಗೊಂಡಿದೆ.
ಹಿಂದಿನ ವರ್ಷಗಳಲ್ಲಿ ಹಾಕಲಾಗಿರುವ ತಾತ್ಕಾಲಿಕ ತಡೆಗೋಡೆಯ ಬಂಡೆ ಕಲ್ಲುಗಳು ಈಗಾಗಲೇ ಸಮುದ್ರಕ್ಕೆ ಆಹುತಿಯಾಗುತ್ತಿದ್ದು ತುರ್ತಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಾಣವಾಗದಿದ್ದಲ್ಲಿ ಇನ್ನಷ್ಟು ಭೂ ಪ್ರದೇಶ ಮತ್ತು ತೆಂಗಿನ ಮರಗಳು ಸಮುದ್ರಕ್ಕೆ ಆಹುತಿಯಾಗುವ ಭೀತಿ ಎದುರಾಗಿದೆ.
Kshetra Samachara
04/07/2022 09:54 pm