ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಸಂಪಾಜೆ ಭಾಗದಲ್ಲಿ ಮನೆ, ತೋಟಗಳು ಜಲಾವೃತ:ಗುಡ್ಡ ಕುಸಿದು ಹಾನಿ

ಸುಳ್ಯ: ಶುಕ್ರವಾರ ರಾತ್ರಿಯಿಂದ ಬಳಿಕ ಭಾರೀ ಮಳೆಯಾಗುತ್ತಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ. ಸಂಪಾಜೆ ಗ್ರಾಮದಲ್ಲಿ ಅಲ್ಲಲ್ಲಿ ಬರೆ ಕುಸಿತ ಉಂಟಾಗಿದ್ದು ಗೂನಡ್ಕ ದರ್ಖಾಸಿನ ಗಣೇಶ್ ಭಟ್ ಎಂಬವರ ಮನೆಗೆ ಹಾನಿಯಾಗಿದೆ. ಧರಣಿ ದಯಾನಂದ ಎಂಬವರ ಮನೆ ಜಲಾವೃತವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ.

ಸಂಪಾಜೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಕಣಿಗಳು ಬ್ಲಾಕ್ ಆಗಿದೆ. ಪಯಸ್ವಿನಿ ನದಿ ಹಾಗು ಇತರ ಹಳ್ಳ ಕೊಳ್ಳಗಳು ತುಂಬಿ ಹರಿದಿದೆ. ಪೇರಡ್ಕ-ದರ್ಕಾಸ್ ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಅಬೂ ಸಾಲಿ, ಜಿ.ಜಿ.ಶಿವಾನಂದ, ಜಿ.ಜಿ. ಹಿಮಕರ, ಚಂದ್ರ ಅವರ ತೋಟಗಳು ಸೇರಿ ಹಲವು ತೋಟಗಳಿಗೆ, ಕೃಷಿ ಭೂಮಿಗೆ, ನದೀ ಪಾತ್ರದ ಪ್ರದೇಶಗಳು ಜಲಾವೃತವಾಗಿದೆ.ಹಲವು ಕಡೆಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಠಿಸಿದೆ. ಕಳೆದ ಕೆಲವು ದಿನಗಳಿಂದ ಭೂ ಕಂಪನ ಆತಂಕ ಸೃಷ್ಠಿಸಿರುವ ಸಂಪಾಜೆಯಲ್ಲಿ ಈಗ ಮಳೆ ಆವಾಂತರ ಸೃಷ್ಠಿಸಿದೆ. ಊರುಬೈಲು ಭಾಗದಲ್ಲಿಯೂ ಬರೆಕುಸಿತ ಉಂಟಾಗಿದ್ದು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

Edited By : Nagaraj Tulugeri
Kshetra Samachara

Kshetra Samachara

02/07/2022 01:20 pm

Cinque Terre

5.6 K

Cinque Terre

0