ಮಂಗಳೂರು: ಶರವೇಗದಿಂದ ಹರಿಯುತ್ತಿರುವ ನೀರಿನಿಂದ ಹೇಗೆ ತೆಂಗಿನ ಕಾಯಿಗಳನ್ನು ಚಾಕಚಕ್ಯತೆಯಿಂದ ಹಿಡಿದು, ಸಂಗ್ರಹಿಸುತ್ತಿದ್ದಾರೆ ನೋಡಿ! ದೇಹದ ಸಮತೋಲನ ಕಾಯ್ದುಕೊಂಡು, ನೀರ ಹರಿವಿನ ದಿಕ್ಕನ್ನೂ ಅಂದಾಜಿಸಿಕೊಂಡು ಸರಕ್ಕನೇ ತೆಂಗು ಹಿಡಿಯುವ ಕಲೆಗೆ ಶಹಬ್ಬಾಸ್ ಎನ್ನಲೇ ಬೇಕು!
ಈಗ ಮಳೆಗಾಲ. ವಾಡಿಕೆಯಂತೆ ಜೋರು ಗಾಳಿ-ಬಿರುಮಳೆಯ ಅಬ್ಬರದ ಪ್ರಕೃತಿ ಆಟ. ಈ ಸಮಯ ಮರಗಳಿಂದ ಫಲಗಳು ಪಟಪಟ ಉದುರೋದು ಸ್ವಾಭಾವಿಕ. ತೆಂಗಿನ ಮರಗಳಿಂದಂತೂ ಸಾಕಷ್ಟು ಕಾಯಿಗಳು ನೆಲಕ್ಕುರುಳುತ್ತವೆ. ನದಿ-ತೊರೆ-ತೋಡು ಬದಿ- ಸರಹದ್ದಿನ ತೆಂಗಿನ ಮರಗಳಿಂದ ಹೀಗೆ ಬಿದ್ದ ನೂರಾರು- ಸಾವಿರಾರು ತೆಂಗಿನ ಕಾಯಿಗಳು ಮಳೆನೀರಿನೊಂದಿಗೆ ರಭಸದಿಂದ ಧಾವಿಸುತ್ತವೆ.
ಹೀಗೆ ಬಂದ ತೆಂಗಿನಕಾಯಿಗಳನ್ನು ತಮ್ಮದಾಗಿಸಲು ಅಲ್ಲಲ್ಲಿ ಕಾದು ಕುಳಿತ್ತಿರುತ್ತಾರೆ ಕೆಲವರು. ಹೇಗೂ ಉಚಿತವಾಗಿ ದೊರೆಯುವ ಫಲ ತಾನೇ. ಆದರೂ ಇಲ್ಲಿ ನೀರಿನ ಸೆಳೆತ ಜೋರು ಇರುತ್ತೆ. ಪರಿಣತರು ಸುಲಭವಾಗಿ ಹಿಡಿಯುತ್ತಾರೆ. ಹೀಗೆ ತೆಂಗಿನ ಕಾಯಿ ಹಿಡಿಯುವ ತಂಡವೂ ಇದೆ. ಇವರ ಕೈಯಿಂದ ತಪ್ಪಿಸಿಕೊಂಡು ಬಂದ ತೆಂಗಿನ ಕಾಯಿಗಳು ಕೊನೆಗೆ ಸಮುದ್ರ ಸೇರಿ ದಡದಲ್ಲಿ ಕಾಣಸಿಗುತ್ತದೆ. ಈ ನಡುವೆ ನೆರೆ ಸಂದರ್ಭ ಒಂದು ತೆಂಗಿನ ಕಾಯಿ ಆಸೆಗೆ ಹೋಗಿ ಅಮೂಲ್ಯ ಜೀವ ಕಳೆದುಕೊಂಡ ನತದೃಷ್ಟರೂ ಹಲವರಿದ್ದಾರೆ.
- ಮನೋಜ್ ಕೆ.ಬೆಂಗ್ರೆ 'ಪಬ್ಲಿಕ್ ನೆಕ್ಸ್ಟ್' ಮಂಗಳೂರು
Kshetra Samachara
02/07/2022 10:21 am