ಉಡುಪಿ: ಜಿಲ್ಲೆಯಲ್ಲಿ ಸ್ವಲ್ಪ ವಿರಾಮದ ಬಳಿಕ ಮತ್ತೆ ಮಳೆ ಆರಂಭಗೊಂಡಿದೆ. ಕಡಲ ತೀರದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಅಲ್ಲದೆ ,ಇವತ್ತು ಜಿಲ್ಲೆಯ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಕುಂದಾಪುರ ಕಾರ್ಕಳ ಹೆಬ್ರಿ ಕಾಪು ಸಹಿತ ಬಹುತೇಕ ಕಡೆ ಹಳ್ಳ ಕೊಳ್ಳಗಳು ತುಂಬಿದ್ದು ಹಲವೆಡೆ ಹೆದ್ದಾರಿಯಲ್ಲಿ ನೀರು ನಿಂತು ಸವಾರರಿಗೆ ಸಮಸ್ತೆಯಾಯಿತು. ಇನ್ನು ನಿನ್ನೆಯ ಕೃತಕ ನೆರೆ ಸ್ವಲ್ಪ ಇಳಿಮುಖಗೊಂಡಿದ್ದರೂ ತಗ್ಗುಪ್ರದೇಶಗಳಲ್ಲಿ ಮನೆ ಇರುವ ಜನರ ತಾಪತ್ರಯ ಇವತ್ತೂ ಮುಂದುವರೆದಿದೆ. ಜಿಲ್ಲಾಡಳಿತ ಸಮಸ್ಯೆಗೆ ಸಿಲುಕಿದವರ ನೆರವಿಗೆ ಧಾವಿಸಲು ಕಂಟ್ರೋಲ್ ರೂಮ್ ತೆರೆದಿದೆ.
Kshetra Samachara
01/07/2022 11:32 am