ಸುಳ್ಯ: ರಾತ್ರಿ 1.15ಕ್ಕೆ ಸಂಭವಿಸಿದ ಲಘು ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಸಮೀಪ ಭೂ ಕಂಪನ ಉಂಟಾಗಿದ್ದು ರಿಕ್ಟರ್ ಸ್ಕೇಲ್‌ನಲ್ಲಿ 1.8 ದಾಖಲಾಗಿದೆ.
ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿರುವುದಾಗಿ ಹೇಳಲಾಗಿದೆ. ಜು.1 ರಂದು ರಾತ್ರಿ 1ಗಂಟೆ 15 ನಿಮಿಷ 12 ಸೆಕೆಂಡ್‌ಗೆ ಕ್ಕೆ ಈ ಭೂಕಂಪನ ದಾಖಲಾಗಿದೆ. 5.2 ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ಕಿ.ಮಿ.ಆಳದಲ್ಲಿ ಭೂಕಂಪನ ಸಂಭವಿಸಿದ್ದು, ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ 11 ಕಿ.ಮಿ ವ್ಯಾಪ್ತಿಯಲ್ಲಿ ಕೊಡಗು ಸಂಪಾಜೆಯ ವಿವಿಧ ಭಾಗಗಳಲ್ಲಿ 11.5 ಕಿ.ಮಿ. ವ್ಯಾಪ್ತಿಯಲ್ಲಿ, ಕರಿಕೆ ಭಾಗದಲ್ಲಿ 9.4 ಕಿ.ಮಿ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ ಎಂದು ವರದಿ ತಿಳಿಸಿದೆ. ವಾರದೊಳಗೆ ನಾಲ್ಕನೇ ಬಾರಿ ಭೂ ಕಂಪನ ಉಂಟಾಗಿದ್ದರು ಜೂ28 ರಂದು ಎರಡು ಬಾರಿ ಕಂಪನ ಉಂಟಾಗಿದ್ದು ರಿಕ್ಟರ್ ಸ್ಕೇಲ್‌ನಲ್ಲಿ 3.0 ಮತ್ತು 1.8 ದಾಖಲಿಸಿತ್ತು. ಜೂ.25 ರಂದು ಸಂಭವಿಸಿದ ಭೂಕಂಪನ ಕರಿಕೆ ಸಮೀಪದಲ್ಲಿ ಸಂಭವಿಸಿದ್ದು ರಿಕ್ಟರ್ ಸ್ಕೇಲ್‌ನಲ್ಲಿ 2.3 ದಾಖಲಾಗಿತ್ತು.
Kshetra Samachara
01/07/2022 09:54 am