ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಮಿ ಕಂಪಿಸಿದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ

ಸುಳ್ಯ: ಭೂ ಕಂಪಿಸಿದ ಪರಿಣಾಮ ಮನೆಗಳಿಗೆ ಬಿರುಕು ಉಂಟಾಗಿ ಆತಂಕ ಸೃಷ್ಠಿಯಾಗಿರುವ ಸಂಪಾಜೆಗೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಗಳಿಗೆ ಬಿರುಕು ಉಂಟಾದ ಪಿ.ಆರ್.ನಾಗೇಶ್, ಗೂನಡ್ಕದ ಅಬೂಸಾಲಿ, ಅಬ್ಬಾಸ್ ಅವರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸುಳ್ಯ ಎಸ್ ಐ ಜಿ.ಆರ್.ದಿಲೀಪ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಗತ್ಯ ಮುಂಜಾಗೃತಾ ಕ್ರಮಕ್ಕೆ ಸೂಚನೆ ನೀಡಿದರು. ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ, ಗ್ರಾಮ ಕರಣಿಕ ಮಿಯಾಸಾಬ್ ಮುಲ್ಲಾ ಜೊತೆಗಿದ್ದರು. ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸದಸ್ಯರಾದ ಕೆ.ಆರ್.ಜಗದೀಶ್ ರೈ, ಶೌವಾದ್ ಗೂನಡ್ಕ, ಎಸ್.ಕೆ.ಹನೀಫ್, ಪ್ರಮುಖರಾದ ರಹೀಂ ಬೀಜದಕಟ್ಟೆ, ಇ.ವಿ.ಪ್ರಶಾಂತ್ ಮತ್ತಿತರರು ಭೇಟಿ ನೀಡಿದರು.

Edited By : Nirmala Aralikatti
Kshetra Samachara

Kshetra Samachara

28/06/2022 07:42 pm

Cinque Terre

3.67 K

Cinque Terre

0