ಕಟಪಾಡಿ: ಉಡುಪಿ ಜಿಲ್ಲೆ ಕಟಪಾಡಿಯ ಭತ್ತದ ಗದ್ದೆಯೊಂದರಲ್ಲಿ ಸಾವಿರಾರು ರೂ. ಮೌಲ್ಯದ ಅಪರೂಪದ ಬೃಹತ್ ಮತ್ಸ್ಯಗಳು ದೊರಕಿದೆ.
ಮುಗುಡು ಜಾತಿಗೆ ಸೇರಿದ ಮೀನುಗಳು ಇದಾಗಿದ್ದು, ಕಟಪಾಡಿ ಕೋಟೆ ಅಂಬಾಡಿಯ ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಅವರ ಭತ್ತದ ಗದ್ದೆಯಲ್ಲಿ ಈ ಮತ್ಸ್ಯ ಕಂಡುಬಂದಿವೆ.
ಸುಂದರ ಪೂಜಾರಿ ಅವರು ಭತ್ತದ ಸಸಿ ಕೀಳುತ್ತಿದ್ದ ಸಂದರ್ಭ ಗದ್ದೆಯಲ್ಲಿ ದೊಡ್ಡ ಗಾತ್ರದ ಮುಗುಡು ಮೀನುಗಳು ಲಭಿಸಿದ್ದು, ಮೀನು ಪ್ರಿಯ ಕುಟುಂಬದಲ್ಲಿ ಸಂತಸ ಮೂಡಿದೆ. ತುಳುವಿನಲ್ಲಿ ʼಮುಗುಡುʼ ಎಂದು ಕರೆಯಲ್ಪಡುವ ಈ ಸಿಹಿನೀರಿನ ಮೀನುಗಳು ತಲಾ 10 ಕೆ.ಜಿ. ತೂಗುತ್ತಿದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಲೆ ಇದೆ.
Kshetra Samachara
25/06/2022 03:10 pm