ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೃತಕ ಕಾವಿನಿಂದ ಹೊರಬಂತು 8 ಹೆಬ್ಬಾವು ಮರಿಗಳು!

ಮಂಗಳೂರು: ಉರಗ ರಕ್ಷಕರಾದ ಸ್ನೇಕ್ ಕಿರಣ್ ಹಾಗೂ ಅಜಯ್ ಅವರು ಕೃತಕ ಕಾವು ನೀಡಿ ದೊರೆತ 8 ಹೆಬ್ಬಾವು ಮರಿಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ‌.

ನಗರದ ಡೊಂಗರಕೇರಿಯ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದಾಗ ಶಮಿತ್ ಸುವರ್ಣ ಎಂಬುವವರಿಗೆ ಈ ಮೊಟ್ಟೆಗಳು ದೊರೆತಿತ್ತು. ಅವರು ಈ ಮೊಟ್ಟೆಗಳ ಬಗ್ಗೆ ಉರಗ ಪ್ರೇಮಿ ಅಜಯ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಜಯ್ ಅವರು, ಉರಗ ರಕ್ಷಕ ಸ್ನೇಕ್ ಕಿರಣ್ ಸಹಕಾರದಲ್ಲಿ ಮೊಟ್ಟೆಗಳಿಗೆ ಕೃತಕ‌ ಕಾವು ನೀಡುವ ವ್ಯವಸ್ಥೆ ಮಾಡಿದ್ದಾರೆ. ಇದೀಗ ಈ ಮೊಟ್ಟೆಗಳಿಂದ ಎಂಟು ಹೆಬ್ಬಾವು ಮರಿಗಳು ಹೊರಬಂದಿವೆ.

ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಮಾರ್ಗದರ್ಶನದಂತೆ ಈ ಹೆಬ್ಬಾವು ಮರಿಗಳನ್ನು ಅರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್.‌ಪೂಜಾರಿ, ಅರಣ್ಯ ರಕ್ಷಕ ಶೋಭಿತ್ ರಾಜ್, ಉರಗ ಪ್ರೇಮಿ ಅಜಯ್, ಉರಗ ರಕ್ಷಕ ಸ್ನೇಕ್ ಕಿರಣ್, ವಾಹನ ಚಾಲಕ ಜಯರಾಮ್ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

23/06/2022 12:41 pm

Cinque Terre

7.96 K

Cinque Terre

0

ಸಂಬಂಧಿತ ಸುದ್ದಿ