ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಬಂದ್ರೆ ಜಲ ದಿಗ್ಬಂಧನ : ಶ್ರೀಕ್ಷೇತ್ರ ಕಟೀಲು ಬ್ರಹ್ಮಕಲಶೋತ್ಸವ ಕಾರಣ?

ಮಂಗಳೂರು: ಮಳೆ ಬಂತೆಂದರೆ ಸಾಕು, ಈ ಮನೆಯವರು ಜಲದಿಗ್ಭಂಧನಕ್ಕೆ ಒಳಗಾಗುತ್ತಾರೆ. ಹಿರಿಯ ನಾಗರಿಕರು, ಸಣ್ಣ ವಯಸ್ಸಿನ ಮಗು ಸೇರಿದಂತೆ ದಂಪತಿಯಿರುವ ಈ ಕುಟುಂಬ ಪದೇ ಪದೇ ಸಂಕಷ್ಟಕ್ಕೊಳಗಾಗುತ್ತಿದೆ. ಹೌದು.. ಶ್ರೀಕ್ಷೇತ್ರ ಕಟೀಲುವಿನ ಪಕ್ಕದಲ್ಲಿಯೇ ಇರುವ ಸಿತ್ಲಬೈಲು‌ ಕೊಂಡೆಮೂಲ ಗ್ರಾಮದ ಕೆ. ರಾಮ ಶೆಟ್ಟಿಗಾರ್ ಎಂಬವರ ಮನೆಯು ಮಳೆಗೆ ಸಂಪೂರ್ಣ ಜಲ ದಿಗ್ಬಂಧನಕ್ಕೊಳಗಾಗಿದೆ.

2020ರ ಬಳಿಕ ಈ ಮನೆ ಪದೇ ಪದೇ ಜಲ ದಿಗ್ಭಂಧನಕ್ಕೆ ಒಳಗಾಗುತ್ತಿದೆ. 2020ರ ಫೆಬ್ರವರಿಯಲ್ಲಿ ಶ್ರೀಕ್ಷೇತ್ರ ಕಟೀಲಿನಲ್ಲಿ‌ ಬ್ರಹ್ಮಕಲಶೋತ್ಸವ ನಡೆಯಿತು‌. ಈ ಸಂದರ್ಭ ಅಡುಗೆ ವ್ಯವಸ್ಥೆಗೆಂದು ತಾತ್ಕಾಲಿಕವಾಗಿ ಮಣ್ಣುಹಾಕಿ ಎತ್ತರ ಮಾಡಿರುವ ಪರಿಣಾಮ ಅಲ್ಲೇ ಪಕ್ಕದಲ್ಲಿದ್ದ ಕೆ. ರಾಮ ಶೆಟ್ಟಿಗಾರ್ ಮನೆ ಗುಂಡಿಯೊಳಗೆ ಬಿದ್ದಂತಾಗಿದೆ. ಸುತ್ತಲೂ ಹರಿಯುವ ನೀರಿಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ನೇರವಾಗಿ ಹರಿದು ಬಂದು ಮನೆಯ ಕಂಪೌಂಡ್ ನೊಳಗೆ ತುಂಬುತ್ತಿದೆ. ಪರಿಣಾಮ ಮನೆಯ ಸುತ್ತಲೂ ನೀರು ನಿಂತು ದ್ವೀಪದಂತಾಗಿದೆ. ಪರಿಣಾಮ ಮನೆಯ ಬಾವಿಯೂ ಕೊಳಚೆ ನೀರಿನಿಂದ ತುಂಬಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಅಲ್ಲದೆ ಮನೆಯ ಒಳಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ.

ಈ ಬಗ್ಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮುಕ್ತೇಸರ ಸನತ್ ಕುಮಾರ್ ಶೆಟ್ಟಿಯವರಿಗೆ, ದ.ಕ. ಜಿಲ್ಲಾಧಿಕಾರಿ‌ಯವರಿಗೆ, ಧಾರ್ಮಿಕ ದತ್ತಿ ಇಲಾಖೆಯ ಎಸಿ, ಕಟೀಲು ಗ್ರಾ. ಪಂ. ಗೆ ಯಾರಿಗೇ ಮನವಿ‌ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಒಂದು ಸಲ ಬಂದು ಏನೋ ತೇಪೆ ಕೆಲಸ ಮಾಡಿ ಹೋಗುತ್ತಾರೆ ವಿನಃ, ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ. ಪರಿಣಾಮ ವರ್ಷಂಪ್ರತಿ ಮಳೆಗೆ ಈ ಕುಟುಂಬ ಭಯದಿಂದಲೇ ಜೀವನ ನಡೆಸುವ ಸಂಕಷ್ಟ ಎದುರಾಗಿದೆ. ಈ ಜಲದಿಗ್ಭಂಧನದಿಂದ ಮುಕ್ತಿ ಎಂತು ಎಂದು ಈ ಕುಟುಂಬ ಎದುರು ನೋಡುತ್ತಿದೆ.

Edited By : Nirmala Aralikatti
Kshetra Samachara

Kshetra Samachara

23/06/2022 11:16 am

Cinque Terre

3.23 K

Cinque Terre

0

ಸಂಬಂಧಿತ ಸುದ್ದಿ