ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಆಹಾರ ಅರಸಿ ನಾಡಿಗೆ ಬಂದು ಪಾಳು ಬಾವಿಗೆ ಬಿದ್ದ ಜಿಂಕೆ ಮರಿಯ ರಕ್ಷಣೆ!

ಕುಂದಾಪುರ: ಆಹಾರ ಅರಸಿಕೊಂಡು ನಾಡಿಗೆ ಬಂದು ಪಾಳು ಬಾವಿಗೆ ಬಿದ್ದ ಜಿಂಕೆ ಮರಿಯನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಕೇದೂರು ಎಂಬಲ್ಲಿ ನಡೆದಿದೆ. ಕುಂದಾಪುರ ತಾಲೂಕಿನ ಕೇದೂರು ಗ್ರಾಮ ಪಂಚಾಯತ್‌ನ ಶಾನಾಡಿ ಎನ್ನುವಲ್ಲಿ ಈ ಘಟನೆ ನಡೆದಿದೆ.

ನಿನ್ನೆ ರಾತ್ರಿ ವೇಳೆ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆ‌ಮರಿ ದಾರಿ ಕಾಣದೆ ಪಾಳು ಬಾವಿಗೆ ಬಿದ್ದಿತ್ತು. ಆಕಸ್ಮಿಕವಾಗಿ ಬಾವಿಗೆ ಬಿದ್ದ ಜಿಂಕೆ ಮರಿಯನ್ನು ಗಮನಿಸಿದ ಶಾನಾಡಿಯ ಯುವರ ತಂಡ ಹಗ್ಗ ಮತ್ತು ಬುಟ್ಟಿಯ ನೆರವಿನಿಂದ ಹರಸಾಹಸಪಟ್ಟು ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ. ಸುಮಾರು 1 ವರ್ಷ ಪ್ರಾಯ ಜಿಂಕೆ ಮರಿ ಇದಾಗಿದ್ದು, ಸದ್ಯ ಅರಣ್ಯ ಇಲಾಖೆಯವರಿಗೆ ಇದನ್ನು ಹಸ್ತಾಂತರಿಸಲಾಗಿದೆ. ಬಳಿಕ ಇಲಾಖೆಯವರು ಜಿಂಕೆ ಮರಿಯನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

Edited By : Shivu K
Kshetra Samachara

Kshetra Samachara

22/06/2022 12:57 pm

Cinque Terre

8.32 K

Cinque Terre

0

ಸಂಬಂಧಿತ ಸುದ್ದಿ