ಉಡುಪಿ: ಹಿರಿಯ ಕೃಷಿ ಸಾಧಕ, ಮಾಜಿ ಶಾಸಕ ಎ.ಜಿ.ಕೊಡ್ಗಿಯವರ ನಿಧನದ ವಾರ್ತೆ ತಿಳಿದು ತೀವ್ರ ವಿಷಾದವಾಗಿದೆ. ಕೃಷಿಯಿಂದ ಅಗಾಧವಾದ ಸಾಧನೆ ಸಾಧ್ಯವೆನ್ನಲು ಓರ್ವ ನೈಜ ನಿದರ್ಶನವಾಗಿದ್ದ ಕೊಡ್ಗಿಯವರು ಕೃಷಿ ಋಷಿಯೇ ಆಗಿದ್ದರು. ಗ್ರಾಮ ಸ್ವರಾಜ್ಯದ ಬಗೆಗೆ ಅವರು ಹೊಂದಿದ್ದ ಅಪರಿಮಿತ ಜ್ಞಾನ ಮತ್ತು ಅಮಾಸೆಬೈಲು ಗ್ರಾಮದ ಏಳಿಗೆಗಾಗಿ ಅವರು ಕೈಗೊಂಡ ಅನೇಕ ಕಾರ್ಯಕ್ರಮಗಳನ್ನು ಗಮನಿಸಿದ್ದೇವೆ. ರಾಜಕೀಯ ಕ್ಷೇತ್ರದಲ್ಲೂ ಓರ್ವ ಶಾಸಕರಾಗಿ, ಮತ್ತು ಇತರೆ ವಿಧಗಳಲ್ಲಿ ಅವರ ಧೀಮಂತಿಕೆಯ ಕೊಡುಗೆಗಳು ನಾಡಿಗೆ ಸಂದಿವೆ.
ನಮ್ಮ ಗುರುಗಳ ಬಹುತೇಕ ಎಲ್ಲ ಪರ್ಯಾಯಗಳಲ್ಲೂ ವಿಶೇಷವಾದ ಸೇವೆಯನ್ನು ಅವರು ಸಲ್ಲಿಸಿರುವುದನ್ನು ಸ್ಮರಿಸುತ್ತೇವೆ. ಶ್ರೀ ಮಠದ ವಿಶೇಷ ಭಕ್ತರೂ, ಆತ್ಮೀಯ ಅಭಿಮಾನಿಗಳೂ ಆಗಿದ್ದ ಶ್ರೀಯುತ ಗೋಪಾಲಕೃಷ್ಣ ಕೊಡ್ಗಿಯವರ ಆತ್ಮಕ್ಕೆ ಶ್ರೀಕೃಷ್ಣ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪೇಜಾವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
Kshetra Samachara
13/06/2022 06:13 pm