ಮಂಗಳೂರು: ಅಸಾನಿಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ,ಉಡುಪಿ ಸೇರಿದಂತೆ ಹಲವು ಕಡೆ ನಿನ್ನೆಯಿಂದ ವ್ಯಾಪಕ ಮಳೆಯಾಗ್ತಿದೆ.
ಇತ್ತ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಬಿಸಿಲೆಘಾಟ್,ದೋಣಿಗಾಲ್ , ಸಿರಿಬಾಗಿಲು ಮುಂತಾದ ಕಡೆ ಭಾರೀ ಮಳೆಯಾಗುತ್ತಿದೆ.
ಕಳೆದ ವರ್ಷ ಮಳೆಗಾಲದಲ್ಲಿ ಹಲವು ಬಾರಿ ಗುಡ್ಡ ಜರಿದು ಬಂಡೆಕಲ್ಲು ಹಳಿಯ ಮೇಲೆ ಉರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು.ಕರಾವಳಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದೆ.
Kshetra Samachara
16/05/2022 06:21 pm