ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ 11 ಗಂಟೆಗಳಿಂದ ನಿರಂತರ ಮಳೆ

ಉಡುಪಿ: ಜಿಲ್ಲೆಯಲ್ಲಿ ಬೇಸಿಗೆ ಮಾಯವಾಗಿ ಮಳೆಗಾಲ ಆರಂಭಗೊಂಡ ಅನುಭವಾಗುತ್ತಿದೆ. ಇಂದು ಮುಂಜಾನೆಯಿಂದ ಪ್ರಾರಂಭಗೊಂಡ ಮಳೆ, ಸತತ ಹನ್ನೊಂದು ಗಂಟೆಗಳಿಂದ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ತುಂತುರು ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಇದು ಅಸಾನಿ ಚಂಡಮಾರುತ ಎಫೆಕ್ಟ್ ಎನ್ನಲಾಗುತ್ತಿದೆ.

ಅರಬ್ಬಿ ಸಮುದ್ರದಲ್ಲಿ ಕಡಲಬ್ಬರವುಂಟಾಗಿದ್ದು, ಮಲ್ಪೆ ಬೀಚಿನಲ್ಲಿ ಜಲಕ್ರೀಡೆಗಳು ರದ್ದುಗೊಂಡಿವೆ. ಸೈಂಟ್ ಮೇರೀಸ್ ದ್ವೀಪಕ್ಕೆ ಅವಧಿಗೂ ಮುನ್ನ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಬೀಚ್‌ನಲ್ಲಿ ಮೋಜು ಮಾಡಲು ಬಂದ ಪ್ರವಾಸಿಗರಿಗೆ ನಿರಾಸೆ ಉಂಟಾಯಿತು. ಜಿಲ್ಲೆಯಾದ್ಯಂತ ಇಡೀ ದಿನ ಮೋಡ ಕವಿದ ವಾತಾವರಣ ನೆಲೆಸಿತ್ತು.

Edited By : Manjunath H D
Kshetra Samachara

Kshetra Samachara

11/05/2022 07:14 pm

Cinque Terre

15.35 K

Cinque Terre

0

ಸಂಬಂಧಿತ ಸುದ್ದಿ