ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಪುರ: ಭಾರೀ ಬೆಂಕಿ ಅವಘಡ - ಹುಲ್ಲು ಸಹಿತ ಹಲವು ಮರಗಳು ಬೆಂಕಿಗಾಹುತಿ

ಬಜಪೆ:ಗುರುಪುರ ಸಮೀಪದ ದೋಣೆಂಜೆ ಪ್ರದೇಶದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು,ಎಕರೆಗಟ್ಟಲೆ ಹಡೀಲು ಭೂಮಿಯಲ್ಲಿ ಹುಲುಸಾಗಿ ಬೆಳೆದ ಒಣಹುಲ್ಲು ಸಹಿತ ಹಲವು ಮರಗಳು ಸುಟ್ಟು ಕರಕಲಾಗಿದೆ.ಅನತಿ ದೂರದಲ್ಲಿರುವ ಕುಕ್ಕುದಕಟ್ಟೆ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿದ್ದು,ಇಲ್ಲಿಯೂ ಹಲವು ಮರಗಳು ಬೆಂಕಿಗಾಹುತಿಯಾಗಿದೆ.ತಾಳೆ,ಈಚಲು,ಮಾವು ಹಾಗೂ ಹಲಸಿನ ಮರಗಳು ಸುಟ್ಟುಕರಕಲಾಗಿದೆ.ಮಾವಿನ ಮರದಲ್ಲಿ ಬೆಳೆದಿದ್ದ ಮಾವು ಸಂಪೂರ್ಣ ಬೆಂದುಹೋಗಿದೆ.ತಾಳೆ ಮರದಲ್ಲಿನ ತಾಳೆಹಣ್ಣು(ಇರೋಳ್ )ಸುಟ್ಟು ಕರಕಲಾಗಿದೆ.

ಬೆಂಕಿ ಅವಘಡ ಸಂಭವಿಸಿದ ಪ್ರದೇಶದಲ್ಲಿ ಗೇಲ್ ಕಂಪೆನಿಯವರು ಭೂಮಿಯ ಒಳಗಡೆ ಆಳವಡಿಸಿದ ಗ್ಯಾಸ್ ಪೈಪ್ ಲೈನ್ ಸಂಪರ್ಕದ ಸೆನ್ಸಾರ್ ಗೂ ಹಾನಿಯಾಗಿದೆ.ಸ್ಥಳಕ್ಕೆ ಕಂಪೆನಿ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದ್ದು,ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದ್ದು.ಬೆಂಕಿಯನ್ನು ನಂದಿಸಿದ್ದಾರೆ.ಬೆಂಕಿ ಅವಘಡ ಸಂಭವಿಸಿದ ಸ್ಥಳದಲ್ಲಿ ಭಾರೀ ಜನರು ಜಮಾಯಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

08/05/2022 08:59 pm

Cinque Terre

8.33 K

Cinque Terre

0

ಸಂಬಂಧಿತ ಸುದ್ದಿ